ಕರ್ನಾಟಕ

karnataka

ETV Bharat / state

ಕರ್ತವ್ಯನಿರತ ಕಾನ್ಸ್​ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ: ಇಬ್ಬರ ಬಂಧನ - ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ

ಕೆಜಿಎಫ್ ತಾಲೂಕಿನ ಆಂಡ್ರಸನ್‍ಪೇಟೆ ಠಾಣೆಯ ಕರ್ತವ್ಯನಿರತ ಕಾನ್ಸ್​ಟೇಬಲ್​ ಮೇಲೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

kolar
ಕರ್ತವ್ಯ ನಿರತ ಕಾನ್ಸ್​ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ: ಇಬ್ಬರ ಬಂಧನ

By

Published : May 11, 2021, 12:38 PM IST

ಕೋಲಾರ: ಕರ್ತವ್ಯನಿರತ ಪೊಲೀಸ್ ಕಾನ್ಸ್​ಟೇಬಲ್​​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್ ತಿಳಿಸಿದ್ದಾರೆ.

ಎಫ್. ಬ್ಲಾಕ್ ನಿವಾಸಿ ರಾಜೇಶ್ (38), ಮಾರಿಕುಪ್ಪಂ ಸಾಮಿಲ್ ಲೈನಿನ ನಿವಾಸಿ ಸಚಿನ್‍ ಸುಧಾಕರ್ (25) ಬಂಧಿತ ಆರೋಪಿಗಳು. ಕೆಜಿಎಫ್ ತಾಲೂಕಿನ ಆಂಡ್ರಸನ್‍ಪೇಟೆ ಠಾಣೆಯ ಕಾನ್ಸ್​ಟೇಬಲ್​ ಅಶೋಕ್, ಚಾಮರಾಜಪೇಟೆಯ ವೃತ್ತದಲ್ಲಿ ಅನಾವಶ್ಯಕವಾಗಿ ತಿರುಗಾಡುತ್ತಿದ್ದವರನ್ನು ತಡೆದು ವಿಚಾರಣೆ ಮಾಡುತ್ತಿದ್ದರು. ಈ ವೇಳೆ ಪಲ್ಸರ್​ ಬೈಕ್​ನಲ್ಲಿ ಬಂದ ಆರೋಪಿಗಳು, ಏಕಾಏಕಿ ಕಾನ್ಸ್​ಟೇಬಲ್​ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದರು.

ಘಟನೆ ನಡೆದ 24 ಗಂಟೆಗಳಲ್ಲಿಯೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪಲ್ಸರ್​ ಬೈಕ್​ ವಶಪಡಿಸಿಕೊಳ್ಳಲಾಗಿದೆ.

ಓದಿ:ಒಂದೇ ದಿನ 6 ಮಂದಿ ಕೋವಿಡ್​ಗೆ ಬಲಿ : ತಂದೆ-ತಾಯಿ ಕಳೆದುಕೊಂಡು ತಬ್ಬಲಿಯಾದ ಯುವಕ

ABOUT THE AUTHOR

...view details