ಕರ್ನಾಟಕ

karnataka

ETV Bharat / state

ಕೋಲಾರ: ಬೃಹತ್​ ಮರದ ಕೊಂಬೆ ಬಿದ್ದು ಇಬ್ಬರು ಸಾವು - 100 ವರ್ಷ ಹಳೆಯದಾದ ಮರ

ಸುಮಾರು 100 ವರ್ಷ ಹಳೆಯದಾದ ಮರದ ಕೊಂಬೆ ಮುರಿದು ಬಿದ್ದು, ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Tree branch fell down
ಮುರಿದು ಬಿದ್ದ ಮರದ ಕೊಂಬೆ

By

Published : Aug 20, 2022, 3:19 PM IST

ಕೋಲಾರ : ಏಕಾಏಕಿ ಬೃಹತ್ತಾದ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟ‌ನೆ ಕೋಲಾರದಲ್ಲಿ ಜರುಗಿದೆ. ಕೋಲಾರ ತಾಲ್ಲೂಕು ಕ್ಯಾಲನೂರು ಗ್ರಾಮದಲ್ಲಿ ಘಟನೆ ಜರುಗಿದ್ದು, ಮರದ ಕೆಳಗೆ ನಿಂತಿದ್ದ ನಾರಾಯಣಪ್ಪ ಹಾಗೂ ಜಮ್ ಶೀರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಕಡಗಟ್ಟೂರು ಸದ್ದಪ್ಪ ಎಂಬುವರು ಗಂಭೀರ ಗಾಯಗೊಂಡಿದ್ದು, ಗಾಯಾಳನ್ನು ಕೋಲಾರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕ್ಯಾಲನೂರು ಗ್ರಾಮದ ಕೆಇಬಿ ಎದುರಿಗಿರುವ ಸುಮಾರು 100 ವರ್ಷ ಹಳೆಯದಾದ ಮರ ಇದಾಗಿದೆ. ಬೃಹದಾಕಾರದ ಕೊಂಬೆ ಮುರಿದು ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಬೃಹತ್​ ಮರದ ಕೊಂಬೆ ಬಿದ್ದು ಇಬ್ಬರು ಸಾವು

ಸ್ನೇಹಿತರಾಗಿದ್ದ ನಾರಾಯಣಪ್ಪ ಹಾಗೂ ಜಮ್ ಶೀರ್, ಸಿದ್ದಪ್ಪ, ಮರದ ಕೆಳಗೆ ನಿಂತು ಮಾತನಾಡುತ್ತಿರುವಾಗ ಅಚಾನಕ್ಕಾಗಿ ಮರದ‌ ಕೊಂಬೆ ಮುರಿದು ಬಿದ್ದಿದೆ. ಈ ವೇಳೆ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.

ಇದನ್ನೂ ಓದಿ :ಮೈಸೂರು: ಹುಟ್ಟುಹಬ್ಬದ ದಿನದಂದೇ ತಲೆ ಮೇಲೆ ಮರದ ಕೊಂಬೆ ಬಿದ್ದು ಯುವಕ ಸಾವು

ABOUT THE AUTHOR

...view details