ಕೋಲಾರ: ನಿಧಿ ಶೋಧನೆಗೆಂದು ಬಂದಿದ್ದ ಐವರು ಖದೀಮರನ್ನು ಗ್ರಾಮಸ್ಥರೇ ಸೆರೆ ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತಾಲೂಕಿನ ಅರಾಭಿಕೊತ್ತನೂರು ಬೆಟ್ಟದಲ್ಲಿ ನಡೆದಿದೆ.
ಕೋಲಾರದಲ್ಲಿ ನಿಧಿಗಾಗಿ ಬಂದ್ರು... ಗ್ರಾಮಸ್ಥರ ಕೈಗೆ ಸಿಕ್ಕಿ ಸರಿಯಾಗಿ ತಿಂದ್ರು! - Kolar
ನಿಧಿಗಾಗಿ ಬಂದಿದ್ದ ಖದೀಮರನ್ನು ಸೆರೆ ಹಿಡಿದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.
ನಿಧಿಗಾಗಿ ಬಂದಿದ್ದ ಖದೀಮರ ತಂಡವನ್ನು ಸೆರೆ ಹಿಡಿದ ಸ್ಥಳೀಯರು
ಚಿಂತಾಮಣಿ ಮೂಲದ ರಘು, ನರಸಿಂಹ, ಪ್ರಸಾದ್, ಆನಂದ್ ಹಾಗೂ ಗುರುಮೂರ್ತಿ ನಿಧಿ ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದರು. ಕೂಡಲೇ ಗ್ರಾಮಸ್ಥರು ಸೇರಿಕೊಂಡು ವಿಚಾರಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಇನ್ನು ಕಳೆದ ರಾತ್ರಿಯಿಂದಲೂ ಗ್ರಾಮದ ಪಕ್ಕದಲ್ಲಿರುವ ಪುರಾತನ ಬೆಟ್ಟದಲ್ಲಿ ನಿಧಿ ಶೋಧನೆ ನಡೆಸುತ್ತಿರುವುದಾಗಿ ಸ್ವತಃ ನಿಧಿಗಳ್ಳರೇ ಗ್ರಾಮಸ್ಥರ ಎದುರು ಒಪ್ಪಿಕೊಂಡಿದ್ದಾರೆ. ಕೋಲಾರದ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.