ಕರ್ನಾಟಕ

karnataka

ETV Bharat / state

ತಾಲೂಕು ಕಚೇರಿಯಲ್ಲಿ ಲಂಚಾವತಾರ : ಶಾಸಕರ ಮನೆ ಮುಂದೆ ಟೊಮೆಟೊ ಸುರಿದು ರೈತರ ಪ್ರತಿಭಟನೆ - karnataka state formers organisation

ಕೋಲಾರ ನಗರದ ಮಹಾಲಕ್ಷ್ಮೀ ಬಡಾವಣೆಯಲ್ಲಿನ ಶಾಸಕ ಶ್ರೀನಿವಾಸಗೌಡ ಮನೆ ಎದುರು ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ರೈತರು ಬೆಳೆದ ಟೊಮೆಟೊ ಬೆಳೆಗೆ ನಿಗದಿತ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿದರು.

ಬೇಡಿಕೆಗಳ ಈಡೇರಿಕೆಗೆ ಶಾಸಕರ ಮನೆ ಮುಂದೆ ಟೊಮೊಟೊ ಸುರಿದು ರೈತರಿಂದ ಪ್ರತಿಭಟನೆ

By

Published : Sep 13, 2019, 5:00 PM IST

ಕೋಲಾರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಾಸಕರ ಮನೆ ಮುಂದೆ ಟೊಮೆಟೊ ಸುರಿದು ರೈತರು ಪ್ರತಿಭಟನೆ ನಡೆಸಿದ ಘಟನೆ ಕೋಲಾರದಲ್ಲಿ ಜರುಗಿದೆ.

ಬೇಡಿಕೆಗಳ ಈಡೇರಿಕೆಗೆ ಶಾಸಕರ ಮನೆ ಮುಂದೆ ಟೊಮೆಟೊ ಸುರಿದು ರೈತರಿಂದ ಪ್ರತಿಭಟನೆ

ಕೋಲಾರ ನಗರದ ಮಹಾಲಕ್ಷ್ಮೀ ಬಡಾವಣೆಯಲ್ಲಿನ ಶಾಸಕ ಶ್ರೀನಿವಾಸಗೌಡ ಮನೆ ಎದುರು ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ರೈತರು ಬೆಳೆದ ಟೊಮೆಟೊ ಬೆಳೆಗೆ ನಿಗದಿತ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿದರು.

ಕೋಲಾರ ನಗರದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ವಾಹನ ಸವಾರರು ಅಪಘಾತಗಳಿಗೆ ತುತ್ತಾಗಿದ್ದಾರೆ. ಜೊತೆಗೆ ಒಳಚರಂಡಿ ದುರಸ್ಥಿ, ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಲಂಚಬಾಕತನಕ್ಕೆ ಕಡಿವಾಣ ಹಾಕಬೇಕೆಂದು ಶಾಸಕರಿಗೆ ಮನವಿ ಮಾಡಿದ ಪ್ರತಿಭಟನಾಕಾರರಿಗೆ ಒಂದು ತಿಂಗಳಲ್ಲಿ ಸಮಸ್ಯೆಗಳನ್ನು ಈಡೇರಿಸುವುದಾಗಿ ಶಾಸಕರು ಭರವಸೆ ನೀಡಿದರು.

ABOUT THE AUTHOR

...view details