ಕೋಲಾರ: ಮತದಾನ ಅತ್ಯಮೂಲ್ಯವಾದ್ದು, ಯುವಕರು ಒಂದು ಹೆಜ್ಜೆ ಮುಂದೆ ಬಂದು ಮತದಾನ ಮಾಡುವುದರ ಜೊತೆಗೆ ಜನರಲ್ಲಿ ಅದರ ಅರಿವು ಮೂಡಿಸಬೇಕು. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಹೊಸ ಮತದಾನದ ಹಕ್ಕನ್ನು ಪಡೆದುಕೊಂಡ ವಿದ್ಯಾರ್ಥಿಗಳು ಈಟಿವಿ ಭಾರತ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮೊದಲ ಬಾರಿಗೆ ಮತದಾನ ಹಕ್ಕು... ನಿಮ್ಮ ವೋಟು ಯಾರಿಗೆ ಅಂದ್ರೆ ಯುವಪಡೆ ಹೀಗಂತಾರೆ - kannada news
ಹೊಸದಾಗಿ ಮತದಾನ ಹಕ್ಕನ್ನು ಪಡೆದು, ಪ್ರಥಮ ಬಾರಿಗೆ ಮತಗಟ್ಟೆಯ ಮೆಟ್ಟಿಲೇರಲಿರುವ ವಿದ್ಯಾರ್ಥಿಗಳು ಮತ ಚಲಾಯಿಸಲು ಉತ್ಸುಕರಾಗಿದ್ದಾರೆ. ಈ ಕುರಿತು ಈಟಿವಿ ಭಾರತ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೋಲಾರ ಲೋಕಸಭಾ ವ್ಯಾಪ್ತಿಯ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಹಾಗೂ ಶಿಡ್ಲಘಟ್ಟ, ಕೋಲಾರ ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ಪಡೆದುಕೊಂಡಿದೆ.ಸತತವಾಗಿ 7 ಬಾರಿ ಸಂಸದರಾಗಿ ಜಯ ಗಳಿಸಿದ್ದ ಕೆ.ಹೆಚ್ ಮುನಿಯಪ್ಪ ವಿರುದ್ದ ಬಿಜೆಪಿ ಅಭ್ಯರ್ಥಿಯಾಗಿ ಎಸ್. ಮುನಿಸ್ವಾಮಿ ಅಖಾಡಕ್ಕಿಳಿದ್ದಾರೆ,
ಇತ್ತ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು, ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು ಅಂದ್ರೆ ಇನ್ನೂ ಕೆಲವರು ರಾಹುಲ್ ಗಾಂಧಿಗೂ ಅಧಿಕಾರವನ್ನು ಕೊಟ್ಟರೆ ಯಾವ ರೀತಿ ಆಡಳಿತ ನಡೆಸಬಹುದು ಎಂಬುದನ್ನು ನೋಡಬೇಕಾಗಿದೆ ಅನ್ನೋ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.