ETV Bharat Karnataka

ಕರ್ನಾಟಕ

karnataka

ETV Bharat / state

ಪೊಲೀಸ್​ ಠಾಣೆಯಲ್ಲಿ ಎಣ್ಣೆ ಹೊಡೆದ ಮೂವರು ಕಾನ್ಸ್​​​ಟೇಬಲ್​ಗಳ ಅಮಾನತು - ಈಟಿವಿ ಭಾರತ ಕನ್ನಡ

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ರಾತ್ರಿ ಪಾಳಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಪೊಲೀಸ್​ ಪೇದೆಗಳು ಠಾಣೆಯಲ್ಲೇ ಎಣ್ಣೆ ಹೊಡೆಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸದ್ಯ ಈ ಮೂವರು ಪೊಲೀಸ್​ ಪೇದೆಗಳನ್ನು ಅಮಾನತುಗೊಳಿಸಲಾಗಿದೆ.

three-police-constables-were-suspended-for-drinking-alchohal-in-police-station
ಪೊಲೀಸ್​ ಠಾಣೆಯಲ್ಲಿ ಎಣ್ಣೆ ಹೊಡೆದ ಮೂವರು ಪೊಲೀಸ್ ಪೇದೆಗಳು ಅಮಾನತು
author img

By

Published : Sep 19, 2022, 9:52 PM IST

ಕೋಲಾರ :ಪೊಲೀಸ್ ಠಾಣೆಯಲ್ಲೇ ಸಿಬ್ಬಂದಿ ಎಣ್ಣೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿದೆ. ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ರಾತ್ರಿ ಪಾಳಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಪೊಲೀಸ್ ಪೇದೆಗಳು ಠಾಣೆಯಲ್ಲಿಯೇ ಎಣ್ಣೆ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು.

ಈ ಸಂಬಂಧ ಕೋಲಾರದ ಎಸ್ಪಿ ಡಿ ದೇವರಾಜ್ ಅವರು ಪೇದೆಗಳಾದ ಆಂಜಿ,‌ ಚಲಪತಿ, ಮಂಜುನಾಥ್ ಎಂಬುವರನ್ನು ಅಮಾನತುಗೊಳಿಸಿದ್ದಾರೆ. ಜೊತೆಗೆ ವಿಡಿಯೋ ಮಾಡಿದ್ದ ಪೊಲೀಸ್ ಪೇದೆ ರಮೇಶ್ ಬಾಬು ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ‌.

ಇನ್ನು ಕೆಲಸದ ಸಮಯದಲ್ಲಿ ಎಣ್ಣೆ ಹಾಕಿ ಮಜಾ ಮಾಡುತ್ತಿದ್ದ ಸಿಬ್ಬಂದಿ, ಪೊಲೀಸ್ ಠಾಣೆಯನ್ನೇ ಬಾರ್ ಆಗಿ ಪರಿವರ್ತಿಸಿದ್ದರು. ಈ ಸಿಬ್ಬಂದಿಗಳ ನಡವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಇದನ್ನೂ ಓದಿ :ಠಾಣೆಯಲ್ಲೇ ಪೊಲೀಸರ ಕಾರು'ಬಾರು': ಎಣ್ಣೆ ಏಟಲ್ಲಿ ನೈಟ್‌ ಡ್ಯೂಟಿ!- ವಿಡಿಯೋ

ABOUT THE AUTHOR

author-img

...view details