ಕರ್ನಾಟಕ

karnataka

ETV Bharat / state

ಕಾಲುವೆಯಲ್ಲಿ ಮುಳುಗಿ ಮೂವರು ಮಕ್ಕಳ ಸಾವು: ಆಟವಾಡುವ ವೇಳೆ ಸಂಭವಿಸಿದ ದುರಂತ - ಕೋಲಾರದ ಬಂಗಾರಪೇಟೆ

ಕೋಲಾರದ ಕುಂಬಾರಪಾಳ್ಯದ ಆಟವಾಡುವ ವೇಳೆ ಕಾಲುವೆಯೊಂದರಲ್ಲಿ ಮುಳುಗಿ ಮೂವರು ಮಕ್ಕಳು ಮೃತಪಟ್ಟಿದ್ದಾರೆ.

three children died in kolar
ಕಾಲುವೆಯಲ್ಲಿ ಮುಳುಗಿ ಮೂವರು ಸಾವು

By

Published : Oct 10, 2020, 5:05 PM IST

ಬಂಗಾರಪೇಟೆ( ಕೋಲಾರ): ಆಟ ಆಡುವ ವೇಳೆ ಮೂವರು ಮಕ್ಕಳು ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೋಲಾರದ ಬಂಗಾರಪೇಟೆ ಪಟ್ಟಣದ ಕುಂಬಾರಪಾಳ್ಯದಲ್ಲಿ ನಡೆದಿದೆ.

ಬಾಲಕಿ ಮೋಹಿಕ (8), ಸಾದಿಕ್ (12), ಫಯಾಜ್ (7) ಮೃತರು ಎಂದು ಗುರುತಿಸಲಾಗಿದೆ.

ಕಳೆದ ರಾತ್ರಿ ಭಾರಿ ಮಳೆ ಬಂದಿದ್ದು, ರೈಲ್ವೆ ಅಂಡರ್ ಪಾಸ್​ನ ಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ಆಟವಾಡುತ್ತಿದ್ದಾಗ ಆಯಾತಪ್ಪಿ ಬಿದ್ದು ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂಗಾರಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details