ETV Bharat Karnataka

ಕರ್ನಾಟಕ

karnataka

ETV Bharat / state

ಗುತ್ತಿಗೆದಾರನಿಗೆ ಜಿಲ್ಲಾ ಪಂಚಾಯತ್ ಸದಸ್ಯನಿಂದ ಧಮ್ಕಿ ಆರೋಪ: ಕಮಿಷನ್​ಗೆ ಬೇಡಿಕೆ - threat by a District Panchayat member to a contractor in Kolar

ಕಮಿಷನ್ ಕೊಡದಿದ್ದರೆ ಕಾರ್ಮಿಕರಿಗೆ ನೀಡುವ ಆಹಾರಕ್ಕೆ ವಿಷಹಾಕುವುದಾಗಿ ಬೆದರಿಕೆ ಹಾಕಿ ದಾದಾಗಿರಿ ಪ್ರದರ್ಶಿಸಿರುವ ಅವರು, ಗ್ರಾಮ ಪಂಚಾಯಿತಿ ಚುನಾವಣೆ ಬಂದಿದೆ, ಚುನಾವಣೆಯ ಖರ್ಚಿಗೆ ಹಣವಿಲ್ಲ. ಕಮಿಷನ್ ಹಣ ಕೊಡಬೇಕು ಎಂದು ಧಮ್ಕಿ ಹಾಕಿದ್ದಾರೆ.

threat-by-a-district-panchayat-member-to-a-contractor-in-kolar
ಜಿಲ್ಲಾ ಪಂಚಾಯತ್ ಸದಸ್ಯ
author img

By

Published : Dec 18, 2020, 6:52 PM IST

ಕೋಲಾರ:ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದಲ್ಲಿರುವ ಆಲ್​ ಕಾರ್ಗೋ ಕಂಪನಿಯ ಕಾರ್ಮಿಕರಿಗೆ ಆಹಾರ ಸರಬರಾಜು ಮಾಡುವ ಗುತ್ತಿಗೆದಾರನಿಗೆ ಕುಡಿಯನೂರು ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಜಿಲ್ಲಾ ಪಂಚಾಯ್ತಿಯ ಆಹಾರ ಮತ್ತು ಶಿಕ್ಷಣ ವಿಭಾಗದ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿ ಗೌಡ ನಾನಿಲ್ಲಿ ಲೋಕಲ್​ ಜನಪ್ರತಿನಿಧಿ, ನನಗೆ ಕಮಿಷನ್​ ಹಣ‌ ನೀಡಬೇಕು ಎಂದು ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಗುತ್ತಿಗೆದಾರನಿಗೆ ಜಿಲ್ಲಾ ಪಂಚಾಯತ್ ಸದಸ್ಯನಿಂದ ಧಮ್ಕಿ ಆರೋಪ

ಕಮಿಷನ್ ಕೊಡದಿದ್ದರೆ ಕಾರ್ಮಿಕರಿಗೆ ನೀಡುವ ಆಹಾರಕ್ಕೆ ವಿಷಹಾಕುವುದಾಗಿ ಬೆದರಿಕೆ ಹಾಕಿ ದಾದಾಗಿರಿ ಪ್ರದರ್ಶಿಸಿರುವ ಅವರು, ಗ್ರಾಮ ಪಂಚಾಯಿತಿ ಚುನಾವಣೆ ಬಂದಿದೆ, ಚುನಾವಣೆಯ ಖರ್ಚಿಗೆ ಹಣವಿಲ್ಲ. ಕಮಿಷನ್ ಹಣ ಕೊಡಬೇಕು, ನಾವು ಲೋಕಲ್, ಇಲ್ಲಿ ಎಲ್ಲವನ್ನೂ ನಾವೇ ನೋಡಿಕೊಳ್ಳೋದು. ನಮಗೆ ಕಮಿಷನ್ ಕೊಡದಿದ್ದರೆ ಆಹಾರ ಸರಬರಾಜು ಮಾಡುವ ವಾಹನಕ್ಕೆ ಬೆಂಕಿ ಹಾಕುವುದಾಗಿ ಅವಾಜ್‌ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಗುತ್ತಿಗೆದಾರನಿಗೆ ಜಿಲ್ಲಾ ಪಂಚಾಯತ್ ಸದಸ್ಯನಿಂದ ಧಮ್ಕಿ ಆರೋಪ

ಓದಿ:ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಇವರ ವರ್ತನೆಯನ್ನು ಖಂಡಿಸಿರುವ ಶಾಸಕ ನಂಜೇಗೌಡ, ಇತ್ತೀಚಿಗಷ್ಟೇ ವಿಸ್ಟ್ರಾನ್ ಕಂಪನಿಯಲ್ಲಿ ದಾಂಧಲೆಯಾಗಿದೆ. ಈ ಬೆನ್ನಲ್ಲೇ ಜನಪ್ರತಿನಿಧಿಯೊಬ್ಬರ ಈ ವರ್ತನೆ ನಿಜಕ್ಕೂ ಖಂಡನೀಯ ಅವರ ವಿರುದ್ದ ಪೊಲೀಸ್​ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.

ಇನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಚಿನ್ನಸ್ವಾಮಿ ಗೌಡ ಆಲ್ ಕಾರ್ಗೋ ಕಂಪನಿಯ ಆಹಾರ ಸರಬರಾಜು ಮಾಡುವ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿರುವ ಕುರಿತು ದೂರು ಬಂದಿರುವ ಹಿನ್ನೆಲೆ ಸದಸ್ಯನ ವಿರುದ್ದ ಜೀವ ಬೆದರಿಕೆ, ಅವಾಚ್ಯ ಶಬ್ದಗಳ ನಿಂದನೆ ಮತ್ತು‌‌ ವಾಹನ ನಿಲುಗಡೆ ತೊಂದರೆ‌ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ‌ಇನ್ನು ವಿಷಯ ತಿಳಿಯುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು‌ ಕಂಪನಿಗೆ ತೆರಳಿ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೇ ಕಂಪನಿಯ ಪ್ರಮುಖರಿಂದ ದೂರು ಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

For All Latest Updates

TAGGED:

ABOUT THE AUTHOR

...view details