ಕರ್ನಾಟಕ

karnataka

ETV Bharat / state

ಕೋಲಾರ: ಕಿಡಿಗೇಡಿಗಳಿಂದ ಕೆರೆಗೆ ವಿಷ; ಮೀನುಗಳ ಮಾರಣಹೋಮ - ಸಾವಿರಾರು ಮೀನುಗಳ ಸಾವು ಪ್ರಕರಣ ಕೋಲಾರ

ಮೀನು ಸಾಕಾಣಿಕೆಗಾಗಿ ಮುನಿಕೃಷ್ಣ ಎಂಬುವವರು ವೆಂಕಟರಾಜನ​ ಕೆರೆಯ ಟೆಂಡರ್ ಪಡೆದು 20 ಸಾವಿರ ಮೀನುಗಳ ಮರಿಗಳನ್ನು ಕೆರೆಗೆ ಬಿಟ್ಟಿದ್ದರು.

KN,KLR_POISON_EFEECT_AV_KA10049
ಕೆರೆಗೆ ವಿಷ ಸಾವಿರಾರು ಮೀನುಗಳ ಸಾವು

By

Published : Aug 1, 2022, 9:56 PM IST

ಕೋಲಾರ: ಕಿಡಿಗೇಡಿಗಳು ವಿಷ ಹಾಕಿದ ಪರಿಣಾಮ ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ಬಂಗಾರಪೇಟೆ ತಾಲ್ಲೂಕಿನ ಜುಂಜನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವೆಂಕಟರಾಜನ ಕೆರೆಗೆ ಕಿಡಿಗೇಡಿಗಳು ವಿಷ ಹಾಕಿದ್ದಾರೆ. ಜೋತನಹಳ್ಳಿ ಗ್ರಾಮಪಂಚಾಯಿತಿ ವತಿಯಿಂದ ಜುಂಜನಹಳ್ಳಿ ಗ್ರಾಮದ ಮುನಿಕೃಷ್ಣ ಎಂಬುವವರು ಕೆರೆಯ ಟೆಂಡರ್ ಪಡೆದು 20 ಸಾವಿರ ಮೀನು‌ ಮರಿಗಳನ್ನು ಬಿಟ್ಟಿದ್ದರು.


ಇದೀಗ ಬೆಳವಣಿಗೆ ಹಂತದಲ್ಲಿಯೇ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಈಗಾಗಲೇ ನಷ್ಟದಲ್ಲಿದ್ದ ಮೀನು ಸಾಕಾಣಿಕೆದಾರರು ದುಷ್ಕೃತ್ಯದಿಂದ ಮತ್ತಷ್ಟು ನಷ್ಟಕ್ಕೊಳಗಾಗಿದ್ದು ಪರಿಹಾರಕ್ಕಾಗಿ ಜಿಲ್ಲಾಡಳಿತದ ಮುಂದೆ ಕೈಚಾಚುವಂತಾಗಿದೆ. ಬೂದಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಇದನ್ನೂ ಓದಿ:ಲಂಪಿ ವೈರಸ್​ನಿಂದ ಹಸುಗಳ ಸರಣಿ ಸಾವು.. ಗೋವುಗಳ ರಾಶಿ ರಾಶಿ ಮೃತದೇಹದ ವಿಡಿಯೋ ವೈರಲ್​

ABOUT THE AUTHOR

...view details