ಕೋಲಾರ: ಹಕ್ಕಿಜ್ವರ ಭೀತಿ ಹಿನ್ನೆಲೆ ಜಿಲ್ಲೆಯಲ್ಲಿ ಸಾವಿರಾರು ಫಾರಂ ಕೋಳಿಗಳು ರಾತ್ರೋರಾತ್ರಿ ಅನಾಥವಾಗಿವೆ.
ಹಕ್ಕಿಜ್ವರ ಭೀತಿ: ರಾತ್ರೋರಾತ್ರಿ ಬೀದಿಗೆ ಬಿದ್ದ ಸಾವಿರಾರು ಕೋಳಿಗಳು! - ಭಾರತದಲ್ಲಿ ಕೊರೊನಾ ವೈರಸ್
ಹಕ್ಕಿಜ್ವರ ಭೀತಿ ಹಿನ್ನೆಲೆ ಕೋಲಾರದಲ್ಲಿ ಸಾವಿರಾರು ಫಾರಂ ಕೋಳಿಗಳನ್ನು ಬೀದಿಗೆ ಬಿಸಾಡಿದ್ದಾರೆ.

ಸಾವಿರಾರು ಫಾರಂ ಕೋಳಿಗಳು ಬೀದಿಗೆ
ಕಳೆದ ವಾರ ಬಂಗಾರಪೇಟೆ ತಾಲೂಕಿನ ಗಾಜಗ ಬಳಿ ಸಾವಿರಾರು ಕೋಳಿಗಳ ಜೀವಂತ ಸಮಾಧಿ ಬಳಿಕ, ಜಿಲ್ಲೆಯ ಮಾಲೂರು ತಾಲೂಕು ಲಕ್ಕೂರು ಕೆರೆಯ ಬಳಿ 10 ಸಾವಿರಕ್ಕೂ ಹೆಚ್ಚು ಕೋಳಿಗಳನ್ನ ತಂದು ಬಿಡಲಾಗಿದೆ. ರಾತ್ರೋರಾತ್ರಿ ಫಾರಂ ಮಾಲೀಕರು ಕೋಳಿಗಳನ್ನು ತಂದು ಬಿಟ್ಟು ಹೋಗಿದ್ದಾರೆ. ಜೀವಂತವಾಗಿರುವ ಕೋಳಿಗಳ ಜತೆ ಮೃತಪಟ್ಟ ಒಂದಷ್ಟು ಕೋಳಿಗಳನ್ನ ಸಹ ಬಿಸಾಡಿದ್ದಾರೆ.
ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.