ಕರ್ನಾಟಕ

karnataka

ETV Bharat / state

ರಾಜಕೀಯದಲ್ಲಿ ಇವತ್ತಿನ ಸ್ನೇಹಿತರು, ನಾಳೆ ವೈರಿಗಳಾಗ್ತಾರೆ: ಸಚಿವ ಎಚ್​ ನಾಗೇಶ್​ - ಉಪಚುನಾವಣೆಯಲ್ಲಿ ಬಿಜೆಪಿಗೆ ನನ್ನ ಬೆಂಬಲ

ಉಪಚುನಾವಣೆಯಲ್ಲಿ ಬಿಜೆಪಿಗೆ ನನ್ನ ಬೆಂಬಲವಿದ್ದು, ಆ ಪಕ್ಷದ ಪರ ಪ್ರಚಾರ ನಡೆಸುತ್ತೇನೆ ಎಂದು ಕೋಲಾರದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿಕೆ ನೀಡಿದ್ರು.

ಸಚಿವ ಎಚ್​ ನಾಗೇಶ್ ಹೇಳಿಕೆ

By

Published : Sep 29, 2019, 2:25 PM IST

ಕೋಲಾರ: ಉಪಚುನಾವಣೆಯಲ್ಲಿ ಬಿಜೆಪಿಗೆ ನನ್ನ ಬೆಂಬಲವಿದ್ದು, ಪಕ್ಷದ ಪರ ಪ್ರಚಾರ ನಡೆಸುತ್ತೇನೆ ಎಂದು ಕೋಲಾರದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿಕೆ ನೀಡಿದ್ರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಅಭ್ಯರ್ಥಿಗಳಿಗೆ ಅದೃಷ್ಟ ಪರೀಕ್ಷೆ. ರಾಜ್ಯದಲ್ಲಿ ಸರ್ಕಾರ ಬದಲಾವಣೆ ಆಗಿರುವ ನಿಟ್ಟಿನಲ್ಲಿ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು. ಅಲ್ಲದೇ ಯಾವುದಾದರೂ ಒಂದು ಕ್ಷೇತ್ರದ ಉಸ್ತುವಾರಿಯನ್ನು ನನಗೆ ಕೊಡುತ್ತಾರೆ. ಹೀಗಾಗಿ ಬಿಜೆಪಿ ಪರ ಪ್ರಚಾರ ಮಾಡುವೆ ಎಂದರು.

ಇದೇ ವೇಳೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪನವರಿಗೆ ಟಾಂಗ್ ನೀಡಿದ ಸಚಿವರು, ಮುನಿಯಪ್ಪ ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಕಾರಣ ಪಾಪ ಅವರಿಗೆ ಈಗ ಕೆಲಸ ಇಲ್ಲ. ಹೀಗಾಗಿ ಮಾಜಿ ಸಂಸದರು ಸೋಲಿಸಿದವರ ವಿರುದ್ದ ಸೇಡು ತೀರಿಸಿಕೊಳ್ಳುವ ತಯಾರಿಯಲ್ಲಿದ್ದಾರೆ ಎಂದರು.

ಸಚಿವ ಎಚ್​ ನಾಗೇಶ್

ದೋಸ್ತಿ ನಾಯಕರ ಜಗಳದ ಕುರಿತು ನನಗೆ ಮಾಹಿತಿ ಇಲ್ಲ, ನಾನು ಟಿವಿಯಲ್ಲಿ ಮಾತ್ರ ನೋಡಿದ್ದೇನೆ. ರಾಜಕೀಯದಲ್ಲಿ ಇವತ್ತು ಸ್ನೇಹಿತರಾಗಿದ್ದವರು, ನಾಳೆ ವೈರಿಗಳಾಗುತ್ತಾರೆ, ನಾಡಿದ್ದು ಬಾಯ್ ಬಾಯ್ ಅಂದುಕೊಳ್ಳುತ್ತಾರೆ ಇದೆಲ್ಲಾ ಎಲ್ಲಾ ಪಕ್ಷದಲ್ಲೂ ಇದ್ದದ್ದೇ ಎಂದು ಸಚಿವ ನಾಗೇಶ್ ಅಭಿಪ್ರಾಯಪಟ್ಟರು.

ABOUT THE AUTHOR

...view details