ಕೋಲಾರ:ಜಿಲ್ಲೆಯ ದರ್ಗಾ ಮೊಹಲ್ಲಾದ ಸರ್ಕಾರಿ ಹೆರಿಗೆ ಆಸ್ಪತ್ರೆಯ ಡಾಕ್ಟರ್ಗಳು ಹಳೆ ಕಾಲದ ಪದ್ಧತಿಯಂತೆ ಯಾವುದೇ ಖರ್ಚಿಲ್ಲದೇ ನಾರ್ಮಲ್ ಡೆಲಿವರಿ ಮಾಡಿಸುತ್ತಿದ್ದಾರೆ. ಇಲ್ಲಿರುವ ಇಬ್ಬರು ವೈದ್ಯರು ಹಾಗೂ ಸ್ಟಾಪ್ ನರ್ಸ್ಗಳು ಬರೋ ಗರ್ಭಿಣಿಯರಿಗೆ ಆರೈಕೆ ಮಾಡಿ, ಆತ್ಮಸ್ಥೈರ್ಯ ತುಂಬಿ ಕೇವಲ ನಾರ್ಮಲ್ ಡೆಲಿವರಿ ಮಾಡಿಸುತ್ತಿರುವ ವಿಧಾನ ಜಿಲ್ಲೆಯ ಯಾವ ಖಾಸಗಿ ಆಸ್ಪತ್ರೆಯಲ್ಲೂ ಮಾಡ್ತಿಲ್ಲ. ಪ್ರತಿ ತಿಂಗಳಿಗೆ 60 ಕ್ಕೂ ಹೆಚ್ಚು ನಾರ್ಮಲ್ ಡೆಲಿವರಿ ಇಲ್ಲಿ ಮಾಡಿಸಲಾಗ್ತಿದೆ.
ಹಾಗಾಗಿನೇ ಈ ಆಸ್ಪತ್ರೆಗೆ ಕೇವಲ ಕೋಲಾರ ಮಾತ್ರವಲ್ಲದೇ ಅಕ್ಕ ಪಕ್ಕದ ತಾಲೂಕು ಸೇರಿದಂತೆ ಬೇರೆ ಬೇರೆ ಜಿಲ್ಲೆಯವ್ರೂ ಸಹ ಇಲ್ಲಿಗೆ ಬಂದು ಹೆರಿಗೆ ಮಾಡಿಸಿಕೊಳ್ತಿದ್ದಾರೆ. ಆಸ್ಪತ್ರೆಯಲ್ಲಿ ಕೇವಲ ಹೆರಿಗೆ ಮಾತ್ರವಲ್ಲ ಇಲ್ಲಿನ ಸ್ವಚ್ಚತೆ ಬಗ್ಗೆ ಯಾರು ಬೆರಳು ತೋರಿಸಿ ಮಾತನಾಡುವಂತ್ತಿಲ್ಲ. ಪ್ರತಿ ಗಂಟೆಗೊಮ್ಮೆ ನೆಲ ಸ್ವಚ್ಚಮಾಡೋದನ್ನ ಇಲ್ಲಿನ ಆಯಾಗಳು ಚಾಚು ತಪ್ಪದೆ ಪಾಲಿಸ್ತಿದ್ದಾರೆ. ಇದರಿಂದ ಹಣವಂತರು ಕೂಡ ಖಾಸಗಿ ಆಸ್ಪತ್ರೆಗೆ ದಾಖಲಾಗದೆ ಇಲ್ಲೇ ಪ್ರಾರಂಭದಿಂದ ಚಿಕಿತ್ಸೆ ಪಡೆದುಕೊಂಡು ಹೆರಿಗೆ ಮಾಡಿಸಿಕೊಳ್ತಿದ್ದಾರೆ.