ಕೋಲಾರ: ದೇವಿಯ ಆರಾಧಕರು ಎಂದು ವೃದ್ಧೆಯನ್ನ ನಂಬಿಸಿ ಹಾಡಹಗಲೇ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿರುವ ಘಟನೆ ನಗರದಲ್ಲಿ ಜರುಗಿದೆ.
ಪೂಜೆಯ ಹೆಸರಿನಲ್ಲಿ ವೃದ್ಧೆಯ ಮಾಂಗಲ್ಯ ಸರ ಎಗರಿಸಿದ ಕಳ್ಳರು - ಗಂಗಾವತಿ ವೃದ್ಧೆಯ ಮಾಂಗಲ್ಯ ಕಳ್ಳತನ
ಮಡಿಕೆ ವ್ಯಾಪಾರಿ ಯಶೋಧಮ್ಮ ಎಂಬುವರ ಹತ್ತಿರ ದೇವಸ್ಥಾನಕ್ಕೆ ಮಡಿಕೆ ನೀಡಬೇಕೆಂದು ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಕಳ್ಳರು, ವೃದ್ಧೆಯನ್ನು ಪುಸಲಾಯಿಸಿ ವಿಶೇಷ ಪೂಜೆ ಮಾಡುವುದಾಗಿ ಹೇಳಿ ವೃದ್ಧೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನ ತೆಗೆದುಕೊಂಡು ಮಡಿಕೆಯಲ್ಲಿ ಹಾಕಿ ಎರಡು ಗಂಟೆಗಳ ನಂತರ ತೆಗೆದುಕೊಂಡರೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ.
ನಗರದ ಕುಂಬಾರಪೇಟೆಯಲ್ಲಿ ಈ ಘಟನೆ ಜರುಗಿದೆ. ಮಡಿಕೆ ವ್ಯಾಪಾರಿ ಯಶೋಧಮ್ಮ ಎಂಬುವರ ಹತ್ತಿರ ದೇವಸ್ಥಾನಕ್ಕೆ ಮಡಿಕೆ ನೀಡಬೇಕೆಂದು ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಕಳ್ಳರು, ವೃದ್ಧೆಯನ್ನು ಪುಸಲಾಯಿಸಿ ವಿಶೇಷ ಪೂಜೆ ಮಾಡುವುದಾಗಿ ಹೇಳಿ ವೃದ್ಧೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನ ತೆಗೆದುಕೊಂಡು ಮಡಿಕೆಯಲ್ಲಿ ಹಾಕಿ ಎರಡು ಗಂಟೆಗಳ ನಂತರ ತೆಗೆದುಕೊಂಡರೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ.
ನಂತರ ವೃದ್ಧೆಯ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಂಡು ಸುಮಾರು 20 ಗ್ರಾಂ ತೂಕದ ಚಿನ್ನದ ಸರದೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನು ಎರಡು ಗಂಟೆಗಳ ಬಳಿಕ ಯಶೋಧಮ್ಮ ಮಡಿಕೆಯನ್ನು ಎತ್ತಿ ನೋಡಿದಾಗ ನಿಜ ಸ್ಥಿತಿ ಅರಿವಾಗಿದೆ. ಸ್ಥಳಕ್ಕೆ ಅಡಿಷನಲ್ ಎಸ್ಪಿ ಜಾನ್ಹವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಲ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.