ಕರ್ನಾಟಕ

karnataka

ETV Bharat / state

ದೇವಸ್ಥಾನದ ಹುಂಡಿ ಹಣ, ಚಿನ್ನದ ನಾಣ್ಯ ದೋಚಿದ ಕಳ್ಳರು - thieves rob the temple

ಕೋಲಾರ ತಾಲೂಕಿನ ಕೆಂಬೋಡಿ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಹುಂಡಿ ಹಣ ಹಾಗೂ ದೇವರಿಗೆ ಹಾಕಲಾಗಿದ್ದ ಚಿನ್ನ, ಬೆಳ್ಳಿ ನಾಣ್ಯಗಳನ್ನು ಕಳ್ಳರು ದೋಚಿದ್ದಾರೆ.

thieves rob the gold coins in kolar
ದೇವಸ್ಥಾನದ ಹುಂಡಿ ಹಣ, ಚಿನ್ನದ ನಾಣ್ಯ ದೋಚಿದ ಕಳ್ಳರು

By

Published : Aug 20, 2020, 5:33 PM IST

ಕೋಲಾರ: ತಾಲೂಕಿನ ದೇವಾಲಯದ ಬೀಗ ಮುರಿದು ಹುಂಡಿಯ ಹಣ, ಬಂಗಾರದ ನಾಣ್ಯಗಳನ್ನು ಕದ್ದಿರುವ ಘಟನೆ ಕಳೆದ ರಾತ್ರಿ ನಡೆದಿದೆ.

ದೇವಸ್ಥಾನದ ಹುಂಡಿ ಹಣ, ಚಿನ್ನದ ನಾಣ್ಯ ದೋಚಿದ ಕಳ್ಳರು

ಕೆಂಬೋಡಿ ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ದೇವಿಗೆ ಹಾಕಲಾಗಿದ್ದ ಬಂಗಾರ, ಬೆಳ್ಳಿ ನಾಣ್ಯಗಳನ್ನು ಕಳ್ಳರು ದೋಚಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸ್ಥಳಕ್ಕೆ ಶ್ವಾನ ದಳ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details