ಕೋಲಾರ: ಹಸಿರು ವಲಯವಾದರೂ ಸದ್ಯ ಜಿಲ್ಲಾದ್ಯಂತ ಯಾವುದೇ ಬಸ್ ಸಂಚಾರ ಇಲ್ಲ ಎಂದು ಕೋಲಾರ ಸಾರಿಗೆ ಇಲಾಖೆಯ ಡಿಪೋ ಮ್ಯಾನೇಜರ್ ರಮೇಶ್ ತಿಳಿಸಿದ್ದಾರೆ.
ಹಸಿರು ವಲಯವಾದರೂ ಕೊಲಾರದಲ್ಲಿ ಬಸ್ ಸಂಚಾರಕ್ಕಿಲ್ಲ ಅವಕಾಶ - green zone kolara
ಹಸಿರು ವಲಯ ಇರುವಂತಹ ಜಿಲ್ಲೆಗಳಲ್ಲಿ ಓಡಾಟಕ್ಕೆ ಷರತ್ತುಬದ್ಧ ಅನುಮತಿ ನೀಡಿ, ಶೇ.50ರಷ್ಟು ಬಸ್ಗಳ ಓಡಾಟಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿತ್ತು. ಆದ್ರೆ, ಸದ್ಯ ಜಿಲ್ಲೆಯಾದ್ಯಂತ ಯಾವುದೇ ಬಸ್ ಸಂಚಾರ ಇಲ್ಲ ಎಂದು ಕೋಲಾರ ಸಾರಿಗೆ ಇಲಾಖೆಯ ಡಿಪೋ ಮ್ಯಾನೇಜರ್ ರಮೇಶ್ ತಿಳಿಸಿದ್ದಾರೆ.

ಹಸಿರು ವಲಯವಾದರೂ ಕೊಲಾರದಲ್ಲಿ ಬಸ್ ಸಂಚಾರಕ್ಕಿಲ್ಲ ಅವಕಾಶ
ಹಸಿರು ವಲಯವಾದರೂ ಕೊಲಾರದಲ್ಲಿ ಬಸ್ ಸಂಚಾರಕ್ಕಿಲ್ಲ ಅವಕಾಶ
ಹಸಿರು ವಲಯ ಇರುವಂತಹ ಜಿಲ್ಲೆಗಳಲ್ಲಿ ಓಡಾಟಕ್ಕೆ ಷರತ್ತುಬದ್ಧ ಅನುಮತಿ ನೀಡಿ, ಶೇ.50ರಷ್ಟು ಬಸ್ಗಳ ಓಡಾಟಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿತ್ತು. ಆದರೆ, ಹಸಿರು ವಲಯ ಕೋಲಾರ ಜಿಲ್ಲೆಯಲ್ಲಿ ಯಾವುದೇ ಸಾರಿಗೆ ಸಂಚಾರ ಪ್ರಾರಂಭವಾಗಿಲ್ಲ.
ಇನ್ನು ರಾಜ್ಯ ಮಟ್ಟದ ಅಧಿಕಾರಿಗಳಿಂದ ಆದೇಶ ಬಂದಿಲ್ಲದ ಕಾರಣ ಕೋಲಾರ ಜಿಲ್ಲೆಯಲ್ಲಿ ಬಸ್ ಸಂಚಾರ ಪ್ರಾರಂಭಿಸುವುದಕ್ಕೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎನ್ನಲಾಗಿದೆ. ಅಲ್ಲದೇ ಮೇ.3ರ ಬಳಿಕ ಅಂತಿಮ ನಿರ್ಧಾರ ಬರಲಿದ್ದು, ಸದ್ಯ ಜಿಲ್ಲೆಯಲ್ಲಿ ಯಾವುದೇ ಬಸ್ ಸಂಚಾರ ಇಲ್ಲದಂತಾಗಿದೆ.