ಕರ್ನಾಟಕ

karnataka

ETV Bharat / state

ಮಾಲೂರಿನಲ್ಲಿ ಮುಂದುವರೆದ ಕಳ್ಳರ ಉಪಟಳ: ಸಾಯಿಬಾಬಾ ದೇವಾಲಯದ ಹುಂಡಿ ಮಾಯ - ಮಾಲೂರಿನ ಸಾಯಿಬಾಬಾ ದೇವಾಲಯದ ಹುಂಡಿ ಕಳ್ಳತನ

ಮಾಲೂರು ಪಟ್ಟಣದಲ್ಲಿ ಕಳ್ಳರು ಕೈ ಚಳಕ ಮುಂದುವರೆಸಿದ್ದು ವೈಟ್ ಗಾರ್ಡನ್ ಬಳಿ ಇರುವ ಸಾಯಿಬಾಬಾ ದೇವಾಲಯದ ಹುಂಡಿಯನ್ನು ಕಳ್ಳತನ ಮಾಡಲಾಗಿದೆ.

ದೇವಾಲಯದ ಹುಂಡಿ ಕಳ್ಳತನ

By

Published : Nov 6, 2019, 9:17 PM IST

ಕೋಲಾರ: ಮಾಲೂರು ಪಟ್ಟಣದಲ್ಲಿ ಕಳ್ಳರ ಕೈಚಳಕ ಮುಂದುವರೆಸಿದ್ದು, ವೈಟ್ ಗಾರ್ಡನ್ ಬಳಿ ಇರುವ ಸಾಯಿಬಾಬಾ ದೇವಾಲಯದ ಹುಂಡಿಯನ್ನು ಕಳ್ಳತನ ಮಾಡಲಾಗಿದೆ. ಹುಂಡಿಯಲ್ಲಿದ್ದ ಹಣವನ್ನು ದೋಚಿದ ಕಳ್ಳರು, ಹುಂಡಿಯನ್ನು ಒಂದು ಕಿ.ಮೀ ದೂರದಲ್ಲಿ ಬಿಸಾಡಿ ಹೋಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸುಮಾರು 25ಕ್ಕೂ ಹೆಚ್ಚು ಕಳ್ಳತನಗಳು ಪಟ್ಟಣದಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಮನೆ, ಅಂಗಡಿ. ದೇವಾಲಯಗಳು ಸೇರಿದಂತೆ ಪಟ್ಟಣದಾದ್ಯಂತ ಕಳ್ಳರ ಕಾಟ ಹೆಚ್ಚಾಗಿದ್ದು, ಕಳ್ಳರ ಜಾಡನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಪೊಲೀಸರ ವಿರುದ್ಧ ಮಾಲೂರಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details