ಕರ್ನಾಟಕ

karnataka

ETV Bharat / state

ಕೋಲಾರ: ಅನಾರೋಗ್ಯದ ವಿಚಾರವಾಗಿ ಆರಂಭವಾದ ಜಗಳದಲ್ಲಿ ವಿಷ ಕುಡಿದು ಅತ್ತೆ-ಸೊಸೆ ಸಾವು! - ಮೂವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ

ಇಡೀ ಪ್ರಪಂಚವೇ ಸದ್ಯ ಕೊರೊನಾ ಅನ್ನೋ ವೈರಸ್​​ನಿಂದ ಅನಾರೋಗ್ಯದಿಂದ ಬಳಲುತ್ತಿದೆ. ಹೀಗಿರುವಾಗ ಇಲ್ಲೊಂದು ಕುಟುಂಬದ ಸದಸ್ಯರು ಅನಾರೋಗ್ಯದಿಂದ ಬಳಲಿ ಬಳಲಿ ಸಹಿಸಿಕೊಳ್ಳಲಾಗದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಇಬ್ಬರು ಮೃತಪಟ್ಟರೆ, ಓರ್ವನ ಸ್ಥಿತಿ ಗಂಭೀರವಾಗಿದೆ.

illness
ವಿಷ ಕುಡಿದು ಇಬ್ಬರ ಸಾವು

By

Published : Jun 19, 2020, 9:15 PM IST

ಕೋಲಾರ:ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಆರಂಭವಾದ ಜಗಳ ಕುಟುಂಬದ ಇಬ್ಬರನ್ನು ಬಲಿ ಪಡೆದಿರುವ ಘಟನೆ ಜಿಲ್ಲೆಯ ಮಾಲೂರು ಪಟ್ಟಣದ ತಿರುಮಲ‌ ಕಲ್ಯಾಣ ಮಂಟಪ ಬಳಿಯ ಆರ್.ಪಿ ಲೇಔಟ್​ನಲ್ಲಿ ನಡೆದಿದೆ.

ತಾಯಿ ಆದಿಲಕ್ಷ್ಮೀ (70), ಸೊಸೆ ಪದ್ಮಾ(46) ಮಗ ನಾಗರಾಜ್(55) ಮೂವರು ಆತ್ಮಹತ್ಯೆಗೆ ಯತ್ನಿಸಿದವರು. ಈ ಪೈಕಿ ಅತ್ತೆ ಮತ್ತು ಸೊಸೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮಗ ನಾಗರಾಜ್ ಸ್ಥಿತಿ ಗಂಭೀರವಾಗಿದೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಪುರಸಭೆ ಸದಸ್ಯ ಹಾಗೂ ನಾಗರಾಜ್​​

ಆಗಿದ್ದಾದರೂ ಏನು?

ಕಳೆದ ಕೆಲವು ತಿಂಗಳಿಂದ ನಾಗರಾಜ್​ ಪತ್ನಿ ಪದ್ಮಾಗೆ ಕಾಲು ನೋವಿನ ಸಮಸ್ಯೆ ಕಾಡುತ್ತಿತ್ತು. ಆಸ್ಪತ್ರೆಗೆ ತೋರಿಸಿದರೂ ಪ್ರಯೋಜವಾಗಿರಲಿಲ್ಲ. ಹಾಗಾಗಿ ಬೆಂಗಳೂರಿನ ಹಾಸ್ಮೆಟ್​ ಆಸ್ಪತ್ರೆಯಲ್ಲಿ ತೋರಿಸಿದ್ದರು. ಅಲ್ಲಿ ಒಂದೂವರೆ ಲಕ್ಷದಷ್ಟು ಹಣ ಖರ್ಚಾಗುತ್ತದೆ ಎಂದು ಹೇಳಿದ್ದರು. ಆದರೆ ನಾಗರಾಜ್​ ಇಬ್ಬರು ಹೆಣ್ಣುಮಕ್ಕಳ ಮದುವೆ ಮಾಡಿ ಸಾಕಾಗಿದ್ದ. ಸದ್ಯಕ್ಕೆ ಚಿಕಿತ್ಸೆ ಕೊಡಿಸುವಷ್ಟು ಶಕ್ತನಾಗಿರಲಿಲ್ಲ.

ಈ ವಿಚಾರವಾಗಿ ಮನೆಯಲ್ಲಿ ಪತ್ರಿನಿತ್ಯ ಜಗಳ ನಡೆಯುತ್ತಿತ್ತು. ಅದರಂತೆ ನಿನ್ನೆಯೂ ಕೂಡಾ ಇದೇ ವಿಚಾರವಾಗಿ ಜಗಳ ನಡೆದಿದೆ. ಈ ವೇಳೆ ನಾಗರಾಜ್​ ತಾನು ಸಾಯೋದಾಗಿ ಹೇಳಿ ವಿಷ ತಂದು ತಾನು ಕುಡಿದು ಮಲಗಿದ್ದಾನೆ. ಇದನ್ನು ಕಂಡ ನಾಗರಾಜ್​ ತಾಯಿ ಆದಿಲಕ್ಷ್ಮಮ್ಮ ಕೂಡಾ ವಿಷ ಕುಡಿದಿದ್ದಾಳೆ. ಇವರಿಬ್ಬರನ್ನು ಕಂಡ ಪತ್ನಿ ಪದ್ಮ ಕೂಡಾ ಉಳಿದ ವಿಷ ಕುಡಿದು ಮಲಗಿದ್ದಾಳೆ. ಈ ಪೈಕಿ ನಾಗರಾಜ್​ ತಾಯಿ ಮತ್ತು ಪತ್ನಿ ಇಬ್ಬರೂ ಮೃತಪಟ್ಟರೆ, ನಾಗರಾಜ್​ ವಾಂತಿ ಮಾಡಿಕೊಂಡು ಬೆಳಿಗ್ಗೆವರೆಗೂ ಒದ್ದಾಡಿದ್ದಾನೆ. ಬೆಳಿಗ್ಗೆ ವೇಳೆಗೆ ನಾಗರಾಜ್​ ತನ್ನ ಅಣ್ಣನ ಮಗ ವಿಜಯ್​ಗೆ ಫೋನ್​ ಮಾಡಿ ವಿಷಯ ತಿಳಿಸಿದಾಗ ಆತ ಬಂದು ಆಸ್ಪತ್ರೆಗೆ ಸೇರಿಸಿ ನಂತರ ಪೊಲೀಸ್​ ಠಾಣೆಗೆ ವಿಷಯ ಮುಟ್ಟಿಸಿದ್ದಾನೆ ಎಂದು ತಿಳಿದು ಬಂದಿದೆ.

ABOUT THE AUTHOR

...view details