ಕೋಲಾರ: ಎಂಪಿ ಎಲೆಕ್ಷನ್ ನಂತರ ಕಾಂಗ್ರೆಸ್‌ನವರು ತಮ್ಮ ಕೆಲಸವಾದ ಮೇಲೆ ಕುಮಾರಣ್ಣನನ್ನ ತಳ್ಳುತ್ತಾರೆಂದು ತಿಳಿದು, ಕಾಂಗ್ರೆಸ್‌ನವರ ಸಹವಾಸ ಬೇಡ ಎಂದು ಕುಮಾರಸ್ವಾಮಿ ಅವರನ್ನ ಕೈಮುಗಿದು ಕೇಳಿಕೊಂಡಿದ್ದೆವು ಎಂದು ಮಾಜಿ ಶಾಸಕ ಮಂಜುನಾಥ್ ಗೌಡ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ರು.
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ಗೆ ಪ್ರತಿಸ್ಪರ್ಧಿ ಕಾಂಗ್ರೆಸ್‌ನವರೇ: ಮಂಜುನಾಥ್ ಗೌಡ - undefined
ಎಂಪಿ ಎಲೆಕ್ಷನ್ ನಂತರ ಕಾಂಗ್ರೆಸ್‌ನವರು ತಮ್ಮ ಕೆಲಸವಾದ ಮೇಲೆ ಕುಮಾರಣ್ಣನನ್ನ ತಳ್ಳುತ್ತಾರೆಂದು ತಿಳಿದು, ಕಾಂಗ್ರೆಸ್‌ನವರ ಸಹವಾಸ ಬೇಡ ಎಂದು ಕುಮಾರಸ್ವಾಮಿ ಅವರನ್ನ ಕೈಮುಗಿದು ಕೇಳಿಕೊಂಡಿದ್ದೆವು ಎಂದು ಮಾಜಿ ಶಾಸಕ ಮಂಜುನಾಥ್ ಗೌಡ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ರು.

ಮಾಜಿ ಶಾಸಕ ಮಂಜುನಾಥ್ ಗೌಡ
ಮಾಜಿ ಶಾಸಕ ಮಂಜುನಾಥ್ ಗೌಡ
ಮೈತ್ರಿ ಸರ್ಕಾರದ ಕುರಿತು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂಪಿ ಎಲೆಕ್ಷನ್ ಮುಗಿದ ಬಳಿಕ ಕಾಂಗ್ರೆಸ್‌ನವರು ನಾಟಕ ಶುರು ಮಾಡುತ್ತಾರೆಂದು ಎಲ್ಲರಿಗೂ ಗೊತ್ತಿತ್ತು ಎಂದರು.
ಅಲ್ಲದೆ ನಮ್ಮದೇ ಸರ್ಕಾರ ಇದ್ದರೂ ಸಹ ತಲೆ ತಗ್ಗಿಸುವಂತಹ ಪರಿಸ್ಥಿತಿ ಬಂದಿದೆ. ವಿನಾ ಕಾರಣ ನಮ್ಮ ಮೇಲೆ ಕೇಸ್‌ಗಳನ್ನ ಹಾಕುವುದರಿಂದ, ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಜೆಡಿಎಸ್ನವರು ನೋವು ಅನುಭವಿಸುತ್ತಿದ್ದಾರೆಂದು ಹೇಳಿದರು. ಕುಮಾರಣ್ಣನವರು ಒಳ್ಳೆಯ ಬಜೆಟ್ ನೀಡಿದ್ದಾರೆ. ಆದರೆ ಹಳೇ ಮೈಸೂರು ಭಾಗದಲ್ಲಿ ನಮಗೆ ಪ್ರತಿಸ್ಪರ್ಧಿ ಕಾಂಗ್ರೆಸ್‌ನವರೇ ಎಂದರು.