ಕರ್ನಾಟಕ

karnataka

ETV Bharat / state

ಕೆಜಿಎಫ್​​ ಆಸ್ಪತ್ರೆಯಲ್ಲಿ ಇಂಜೆಕ್ಷನ್​​ ನೀಡಿ ಬಾಲಕನ ದೇಹದೊಳಗೇ ಮುರಿದ ಸೂಜಿ ಬಿಟ್ಟ ನರ್ಸ್​! - ಕೆಜಿಎಫ್ ಸರ್ಕಾರಿ ಆಸ್ಪತ್ರೆ ಲೇಟೆಸ್ಟ್​​ ಸುದ್ದಿ

ಜ್ವರದಿಂದ ಬಳಲುತ್ತಿದ್ದ ಬಾಲಕನಿಗೆ ವೈದ್ಯರ ತಪಾಸಣೆ ಬಳಿಕ ನರ್ಸ್ ಇಂಜೆಕ್ಷನ್ ನೀಡಿದ್ದಾರೆ. ಈ ವೇಳೆ ಇಂಜೆಕ್ಷನ್‍ನ ಸೂಜಿ ಮುರಿದಿದ್ದು, ಅದನ್ನು ನರ್ಸ್ ಬಾಲಕನ ದೇಹದೊಳಗೇ ಬಿಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಕೆಜಿಎಫ್ ಆಸ್ಪತ್ರೆ ಎಡವಟ್ಟು

By

Published : Oct 27, 2019, 2:19 PM IST

ಕೋಲಾರ:ಇಂಜೆಕ್ಷನ್ ನೀಡಿ ಸೂಜಿಯನ್ನ ಬಾಲಕನ ದೇಹದೊಳಗೆ ಬಿಟ್ಟು ನರ್ಸ್ ಎಡವಟ್ಟು ಮಾಡಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಇಂಜಕ್ಷನ್ ನೀಡಿ ಬಾಲಕನ ದೇಹದೊಳಗೇ ಸೂಜಿ ಬಿಟ್ಟ ನರ್ಸ್

ಜ್ವರದಿಂದ ಬಳಲುತ್ತಿದ್ದ 5 ವರ್ಷದ ಅಭಿಲಾಷ್ ಎಂಬ ಬಾಲಕನನ್ನು ಆತನ ಪೋಷಕರು ಚಿಕಿತ್ಸೆಗೆಂದು ಶನಿವಾರ ಸಂಜೆ ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರ ತಪಾಸಣೆ ಬಳಿಕ ನರ್ಸ್ ಇಂಜೆಕ್ಷನ್ ನೀಡಿದ್ದಾರೆ. ಈ ವೇಳೆ ಇಂಜೆಕ್ಷನ್‍ನ ಸೂಜಿ ಮುರಿದಿದ್ದು, ಅದನ್ನು ನರ್ಸ್ ಬಾಲಕನ ದೇಹದೊಳಗೇ ಬಿಟ್ಟಿದ್ದಾಳೆ. ಆದರೆ ಸೂಜಿ ಕಟ್ ಆದ ಮಾಹಿತಿಯನ್ನೂ ನೀಡದೆ ಸಿಬ್ಬಂದಿ ಹಾಗೂ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಗುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಕ್ಯಾನಿಂಗ್ ಪ್ರತಿ

ಬಳಿಕ ಸೊಂಟ ನೋವಿನಿಂದ ಒದ್ದಾಡುತ್ತಿದ್ದ ಬಾಲಕನನ್ನು ಸಂಜೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಸತ್ಯ ಬಯಲಾಗಿದ್ದು, ಪೋಷಕರು ಕೆಜಿಎಫ್ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಭಿಲಾಷ್‍ಗೆ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details