ಕೋಲಾರ :ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ಹೊರ ರಾಜ್ಯದಿಂದ ಉರುಸ್‌ಗೆ ಬಂದಿದ್ದವರನ್ನ ಮುಳಬಾಗಿಲು ತಾಲೂಕು ಆರೋಗ್ಯ ಇಲಾಖೆ ಹಾಗೂ ನಗರ ಠಾಣಾ ಪೊಲೀಸರ ಸಮ್ಮುಖದಲ್ಲಿ ತಪಾಸಣೆ ಮಾಡಲಾಗುತ್ತಿದೆ.
ಕೋಲಾರದಲ್ಲಿ ಉರುಸ್ ಆಚರಣೆಗೆಂದು ಬಂದಿದ್ದ 110 ಜನರ ಆರೋಗ್ಯ ತಪಾಸಣೆ.. - Town of Mulagabilu
ಮುಳಬಾಗಿಲು ಪಟ್ಟಣದಲ್ಲಿ ಹೊರ ರಾಜ್ಯದಿಂದ ಉರುಸ್ ಗೆ ಬಂದಿದ್ದವರನ್ನ, ಮುಳಬಾಗಿಲು ತಾಲೂಕು ಆರೋಗ್ಯ ಇಲಾಖೆ ಹಾಗೂ ನಗರ ಠಾಣಾ ಪೊಲೀಸರ ಸಮ್ಮುಖದಲ್ಲಿ ತಪಾಸಣೆ ಮಾಡಲಾಗುತ್ತಿದೆ.
ಕೋಲಾರದಲ್ಲಿ ಉರುಸ್ ಆಚರಣೆಗೆಂದು ಬಂದಿದ್ದ 110 ಜನರ ಆರೋಗ್ಯ ತಪಾಸಣೆ
ಮುಳಬಾಗಿಲು ಪಟ್ಟಣದಲ್ಲಿ ಮಾರ್ಚ್ 6-7-8ನೇ ತಾರೀಖಿನಂದು ನಡೆದಿದ್ದ ಉರುಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇವರು, ಬಿಹಾರ್, ಉತ್ತರಪ್ರದೇಶ, ಕೋಲ್ಕತಾ, ರಾಜಸ್ಥಾನ ಸೇರಿದಂತೆ ಅಸ್ಸೋಂ ರಾಜ್ಯಗಳಿಂದ ಬಂದವರಾಗಿದ್ದಾರೆ. ಇವರೆಲ್ಲಾ ಉರುಸ್ ಹಿನ್ನೆಲೆ ಫೆ.28ರಂದು ವ್ಯಾಪಾರ ಹಾಗೂ ಕೂಲಿ ಕೆಲಸಕ್ಕೆಂದು ಬಂದಿದ್ದರು ಎನ್ನಲಾಗಿದೆ. ಇವರು ತಾಲೂಕಿನ ವಿವಿಧೆಡೆಯಲ್ಲಿ ವಾಸ್ತವ್ಯ ಹೂಡಿದ್ದರು.