ಕೋಲಾರ: ಕೋಟೆ ಸುತ್ತಲೂ ಸುಂದರವಾದ ವಾತಾವರಣ, ಕೋಟೆಯ ಮೇಲೆ ನಿಂತು ನೋಡಿದಾಗ ಕಣ್ಮನ ತಣಿಸುವ ಪ್ರಕೃತಿ ಸೌಂದರ್ಯ. ಇಂಥಾದೊಂದು ದೃಶ್ಯ ನಮಗೆ ಕಾಣಸಿಗೋದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೈದರಾಲಿ ಕೋಟೆಯಲ್ಲಿ.
ಅಭಿವೃದ್ಧಿ ಕಾಣದ ಈ ಇತಿಹಾಸ ಪುರುಷನ ಸ್ಥಳ... ಸರ್ಕಾರದ ನಿರ್ಲಕ್ಷ್ಯ ಯಾಕೆ? - undefined
ಅದು ಇತಿಹಾಸ ಸೃಷ್ಟಿಸಿದ ಮಹಾ ಪುರುಷರೊಬ್ಬರ ಹುಟ್ಟಿದ ಸ್ಥಳ. ಸಾಮಾನ್ಯ ಕುಟುಂಬದಲ್ಲಿ ಜನಿಸಿದವ ದೇಶ ಮೆಚ್ಚುವ ಶಕ್ತಿಯಾಗಿ ಬೆಳೆದು ನಿಂತು, ಎಲ್ಲರಿಗೂ ಪ್ರೇರಣೆ ನೀಡಬಲ್ಲ ವ್ಯಕ್ತಿಯಾದ್ರು. ಆದ್ರೆ ಅಂಥ ವ್ಯಕ್ತಿಯ ಇತಿಹಾಸ ಹೇಳುವ ಸ್ಮಾರಕ ಇಂದು ಮೂಕವಾಗಿದೆ. ಅಷ್ಟಕ್ಕೂ ಏನದು? ಈ ಸ್ಟೋರಿ ನೋಡಿ.
ಇದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಹೈದರಾಲಿ ಹುಟ್ಟಿದ ಬೂದಿಕೋಟೆ. ಇಂದಿಗೂ ತನ್ನದೇ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ಬೂದಿಕೋಟೆಯಲ್ಲಿ ಬೃಹತ್ತಾದ ಕೋಟೆ, ಕಲ್ಯಾಣಿ, ವೇಣುಗೋಪಾಲಸ್ವಾಮಿ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯಗಳು ಕಾಣಸಿಗುತ್ತವೆ. ಆದ್ರೆ ಪ್ರವಾಸೋದ್ಯಮ ಇಲಾಖೆ ಹಾಗೂ ಪುರಾತತ್ವ ಇಲಾಖೆ ಇದನ್ನು ಒಂದು ಪ್ರವಾಸಿ ಕೇಂದ್ರವಾಗಿ ಅಭಿವೃದ್ದಿ ಪಡಿಸುವಲ್ಲಿ ನಿರ್ಲಕ್ಷ್ಯ ತೋರಿದೆ.
ಹೈದರಾಲಿ ಸರ್ವಧರ್ಮ ಸಮನ್ವಯಿಯಾಗಿ ಭಾಷೆ, ಸಂಸ್ಕೃತಿ ಹಾಗೂ ರಾಜ್ಯದ ದೇವಾಲಯಗಳಿಗೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಕೇವಲ ಪಠ್ಯ, ಪುಸ್ತಕಗಳಲ್ಲಿ ಇತಿಹಾಸ ಹೇಳುವುದಕ್ಕಿಂತ ಇಂಥ ಸ್ಮಾರಕಗಳನ್ನು ಜೀವಂತವಾಗಿ ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ. ಈ ಸ್ಥಳವೇ ಒಂದು ಇತಿಹಾಸ ಹೇಳುವ ಗ್ರಂಥಾಲಯವಾಗಿ, ಹಿಂದಿನ ಘಟನೆಗಳನ್ನು ಜೀವಂತವಾಗಿ ತೋರಿಸಬಲ್ಲ ಚಿತ್ರವಾಗಿ ನಮ್ಮ ಕಣ್ಣಮುಂದೆ ಉಳಿಯುತ್ತದೆ ಅಂತಾರೆ ಕೆಲವರು.