ಕರ್ನಾಟಕ

karnataka

ETV Bharat / state

ಕೆಜಿಎಫ್​ನಲ್ಲಿ ವಾಟಾಳ್ ಹೋರಾಟ ಮುಗಿದ ಎರಡೇ ದಿನಕ್ಕೆ ಮತ್ತೆ ತಲೆ ಎತ್ತಿವೆ ತಮಿಳು ಬೋರ್ಡ್​ಗಳು - Tamil Board in KGF news

ಕೋಲಾರ ಜಿಲ್ಲೆಯ ಕೆಜಿಎಫ್​ನ ನಗರಸಭೆ ಆಡಳಿತ ಮಂಡಳಿ ತಮಿಳು ಭಾಷೆಗೆ ಒತ್ತು ನೀಡಿವಂತಹ ಆದೇಶಗಳನ್ನು ಹೊರಡಿಸಲಾಗಿದೆ ಎಂದು ಆರೋಪಿಸಲಾಗಿದ್ದು, ವಾಟಾಳ್ ನಾಗರಾಜ್ ಹೋರಾಟ ಮಾಡಿ ಹೋದ ಎರಡು ದಿನಕ್ಕೆ ಮತ್ತೆ ಬಸ್ ನಿಲ್ದಾಣದ ನಾಮಫಲಕದಲ್ಲಿ ತಮಿಳು ಭಾಷೆ ಬರೆಯಲಾಗಿದೆ.

Tಕೆಜಿಎಫ್​ನಲ್ಲಿ ಮತ್ತೆ ತಲೆಎತ್ತಿವೆ ಪರ ಭಾಷೆಯ ಬೋರ್ಡ್​ಗಳು..
ಕೆಜಿಎಫ್​ನಲ್ಲಿ ಮತ್ತೆ ತಲೆಎತ್ತಿವೆ ಪರ ಭಾಷೆಯ ಬೋರ್ಡ್​ಗಳು..

By

Published : Jul 13, 2021, 9:04 PM IST

ಕೋಲಾರ:ಜಿಲ್ಲೆಯ ಕೆಜಿಎಫ್​ನ ನಗರಸಭೆ ಆಡಳಿತ ಮಂಡಳಿ ತಮಿಳು ಭಾಷೆಗೆ ಒತ್ತು ನೀಡಿರುವಂತಹ ಆದೇಶಗಳನ್ನು ಹೊರಡಿಸುವ ಮೂಲಕ ಕನ್ನಡ ಹಾಗೂ ಕನ್ನಡಪರ ಹೋರಾಟಗಾರರಿಗೆ ಅವಮಾನ ಮಾಡಿದೆ. ಕೆಜಿಎಫ್ ನಗರಸಭೆ ಆಡಳಿತ ಮಂಡಳಿ ಹಾಗೂ ಅಲ್ಲಿನ ಕೆಲ ನಕಲಿ ಕನ್ನಡ ಪರ ಸಂಘಟನೆ ಮುಖಂಡರು ವಿರುದ್ಧ ಇಂತಹದ್ದೊಂದು ಆರೋಪ ಕೇಳಿಬಂದಿದೆ.

ಜುಲೈ 10 ರಂದು ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ಕೆಜಿಎಫ್​ಗೆ ಆಗಮಿಸಿ ತಮಿಳು ನಾಮಫಲಕಗಳನ್ನು ತೆಗೆಯುವಂತೆ ಆಗ್ರಹಿಸಿದರು. ಇನ್ನೂ ಬಸ್ ನಿಲ್ದಾಣದಲ್ಲಿ ತಮಿಳು ಭಾಷೆಯಲ್ಲಿ ಬರೆಯಲಾಗಿದ್ದ ನಾಮಫಲಕಕ್ಕೆ ಕಪ್ಪು ಮಸಿ ಬಳೆದು ಹೋರಾಟ ನಡೆಸಿದರು. ಆದ್ರೆ ವಾಟಾಳ್ ನಾಗರಾಜ್ ಹೋರಾಟ ಮಾಡಿ ಹೋದ ಎರಡು ದಿನಕ್ಕೆ ಮತ್ತೆ ಬಸ್ ನಿಲ್ದಾಣದ ನಾಮಫಲಕದಲ್ಲಿ ತಮಿಳು ಭಾಷೆ ಬರೆಯಲಾಗಿದೆ.

ಮತ್ತೆ ತಲೆ ಎತ್ತಿವೆ ತಮಿಳು ಬೋರ್ಡ್​ಗಳು

ಮತ್ತೆ ಅಂಗಡಿಗಳ ಮೇಲೆ ತಮಿಳು ನಾಮಫಲಕಗಳು ಎದ್ದು ನಿಂತಿವೆ. ವಾಟಾಳ್ ನಾಗರಾಜ್ ತಮಿಳು ಹೋರಾಟದ ವಿರುದ್ಧ ತೊಡೆತಟ್ಟಿ ನಿಂತ ತಮಿಳು ಭಾಷಿಗರು ಹಾಗೂ ತಮಿಳು ಭಾಷೆ ಪರ ನಗರಸಭೆ ಸದಸ್ಯರು ನಿನ್ನೆ ನಗರಸಭೆ ಕಚೇರಿಯಲ್ಲಿ ಸಭೆ ಸೇರಿ ಕೆಲವು ಸ್ಥಳೀಯ ಕನ್ನಡ ಪರ ಸಂಘಟನೆ ಮುಖಂಡರನ್ನು ಕರೆಯಿಸಿ ರಾಜಿ ಸಂಧಾನ ಮೂಲಕ ತಮಿಳು ಭಾಷೆಗೆ ಅನ್ಯಾಯವಾಗದಂತೆ ನೋಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಿ ಕೆಜಿಎಫ್ ನಗರದಲ್ಲಿ ತಮಿಳು ಭಾಷೆಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಠರಾವು ಹೊರಡಿಸಲಾಗಿದೆ ಎನ್ನಲಾಗಿದೆ. ಕಪ್ಪು ಮಸಿ ಬಳಿದಿದ್ದ ನಾಮಫಲಕದಲ್ಲಿ ಮತ್ತೆ ತಮಿಳು ಭಾಷೆ ಬರೆಯಲಾಗಿದೆ. ತಮಿಳು ನಾಮಫಲಕಗಳನ್ನು ಹಾಕಲು ಸೂಚಿಸಲಾಗಿದೆ ಎಂದು ಹೇಳಲಾಗಿದೆ.

ABOUT THE AUTHOR

...view details