ಕರ್ನಾಟಕ

karnataka

ETV Bharat / state

ಆಕ್ಸಿಜನ್ ಸಾಗಾಣಿಕೆ ಮಾಡುತ್ತಿದ್ದ ವಾಹನ ತಪಾಸಣೆ ನಡೆಸಿದ ತಹಶೀಲ್ದಾರ್ - oxygen carrying vehicle

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಹಶೀಲ್ದಾರ್ ಶೋಭಿತ, ಕೋಲಾರದ ಡೂಂ ಲೈಟ್ ಸರ್ಕಲ್​ ಬಳಿ ಆಕ್ಸಿಜನ್ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನ ತಡೆದು ತಪಾಸಣೆ ನಡೆಸಿದ್ರು..

kolar
ಆಕ್ಸಿಜನ್ ಸಾಗಾಣಿಕೆ ಮಾಡುತ್ತಿದ್ದ ವಾಹನ ತಪಾಸಣೆ ನಡೆಸಿದ ತಹಶೀಲ್ದಾರ್

By

Published : May 10, 2021, 12:43 PM IST

ಕೋಲಾರ :ಅಕ್ರಮವಾಗಿ ಸಾಗಾಣಿಕೆಯ ಶಂಕೆಯ ಮೇರೆಗೆ ಆಕ್ಸಿಜನ್ ಸಿಲಿಂಡರ್​ಗಳನ್ನ ಹೊಂದಿದ್ದ ಟೆಂಪೋ ತಡೆದು ಪರಿಶೀಲನೆ ನಡೆಸಲಾಯಿತು.

ಆಕ್ಸಿಜನ್ ಸಾಗಾಣಿಕೆ ಮಾಡುತ್ತಿದ್ದ ವಾಹನ ತಪಾಸಣೆ ನಡೆಸಿದ ತಹಶೀಲ್ದಾರ್

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಗರದ ಡೂಂ ಲೈಟ್ ಸರ್ಕಲ್ ಬಳಿ ತಹಶೀಲ್ದಾರ್ ಶೋಭಿತ ದಾಳಿ ನಡೆಸಿ, ಆಕ್ಸಿಜನ್ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನ ತಡೆದು ತಪಾಸಣೆ ನಡೆಸಿದ್ರು.

ದಾಳಿ ವೇಳೆ ಆಕ್ಸಿಜನ್ ಟೆಂಪೋದಲ್ಲಿ ಸುಮಾರು 160 ಖಾಲಿ ಸಿಲಿಂಡರ್​ಗಳಿದ್ದು, ಮಾಲೂರು ಕೈಗಾರಿಕಾ ಪ್ರದೇಶದಲ್ಲಿರುವ ವೆಂಕಟೇಶ್ವರ ಗ್ಯಾಸ್ ಕಂಪನಿಯಲ್ಲಿ ಆಕ್ಸಿಜನ್ ತುಂಬಿಕೊಂಡು ಬರಲು ಹೋಗುತ್ತಿದ್ದ ವಾಹನ ಇದಾಗಿತ್ತು.

ಆಸ್ಪತ್ರೆ ಹಾಗೂ ಕೈಗಾರಿಕೆಗಳಿಗೆ ಆಕ್ಸಿಜನ್ ಪೂರೈಸಲುಖಾಲಿ ಸಿಲಿಂಡರ್​​​​​​​ಗಳಲ್ಲಿ ಆಕ್ಸಿಜನ್ ತುಂಬಿಕೊಂಡು ಬರಲು ಹೊರಟಿತ್ತು ಈ ವಾಹನ ಹೊರಟಿತ್ತು.

ಓದಿ:ಶಾಕಿಂಗ್​ ಸುದ್ದಿ.. ಇತರೆ ಕಾಯಿಲೆಗಳಿಲ್ಲದಿದ್ದರೂ ಸಹ ಕೊರೊನಾ‌ ಸೋಂಕಿಗೆ ಬಲಿಯಾದವರೇ ಹೆಚ್ಚು!

ABOUT THE AUTHOR

...view details