ಕರ್ನಾಟಕ

karnataka

ETV Bharat / state

ಜನತಾ ಕರ್ಫ್ಯೂಗೆ ಕೋಲಾರದಲ್ಲಿ ಬೆಂಬಲ: ಬಸ್​ ಸಿಗದೆ ಬಾಣಂತಿಯ ಪರದಾಟ - pregnant faced problem in kolar due to curfew

ಕೊರೊನಾ ಸೋಂಕು ತಡೆಗಟ್ಟುವುದಕ್ಕೆ ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಇಂದು ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ. ಆದ್ರೆ, ಈ ವೇಳೆ ಬಾಣಂತಿಯೋರ್ವಳು ಪರದಾಟ ನಡೆಸಿದ ಘಟನೆ ನಡೆದಿದೆ.

Support for the Janata curfew in Kolar...pregnant faced problem
ಜನತಾ ಕರ್ಫ್ಯೂಗೆ ಕೋಲಾರದಲ್ಲಿ ಬೆಂಬಲ....ಬಸ್​ ಸಿಗದೆ ಬಾಣಂತಿಯೋರ್ವಳ ಪರದಾಟ

By

Published : Mar 22, 2020, 9:58 AM IST

ಕೋಲಾರ: ಜನತಾ ಕರ್ಫ್ಯೂ ವೇಳೆ ಕೋಲಾರದಲ್ಲಿ ಬಾಣಂತಿಯೋರ್ವಳು ಪರದಾಟ ನಡೆಸಿದ ಘಟನೆ ಕಂಡು ಬಂದಿದೆ.

ಬಸ್​ ಸಿಗದೆ ಕೋಲಾರದಲ್ಲಿ ಬಾಣಂತಿ ಸಂಕಷ್ಟ ಅನುಭವಿಸಿದರು.

ಜನತಾ ಕರ್ಫ್ಯೂ ಇರುವ ಕಾರಣ ಕೋಲಾರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಿಕೋ ಎನ್ನುವಂತಿತ್ತು. ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದು, ಎಲ್ಲೂ ಕೂಡಾ ಜನಸಂದಣಿ ಕಾಣುತ್ತಿಲ್ಲ. ಈ ವೇಳೆ, ಆಟೋದಲ್ಲಿ ಆಗಮಿಸಿದ ಬಾಣಂತಿ ಹಾಗೂ ಅವರ ಕುಟುಂಬ, ಬಸ್ ಸಿಗದೆ ಪರದಾಟ ನಡೆಸಿದ್ದಾರೆ. ಕೆಲ ಸಮಯ ಕಾದಿರುವ ಅವರು ಬಳಿಕ ಬಂದ ಆಟೋದಲ್ಲಿ ಅವರು ಮನೆಯತ್ತ ಹಿಂತಿರುಗಿದರು.

ABOUT THE AUTHOR

...view details