ಕೋಲಾರ :ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕು ಸುಂದರಪಾಳ್ಯ ಗ್ರಾಮ ಪಂಚಾಯತ್‌ಗೆ ಅಧಿಕಾರಿಗಳು ಕೆಲಸಕ್ಕೆ ಸರಿಯಾಗಿ ಬಾರದ ಕಾರಣ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಸುಂದರ ಪಾಳ್ಯ ಗ್ರಾಮ ಪಂಚಾಯತಿ ಪಿಡಿಒ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ.. - Kolar news
ಆಂಧ್ರದ ಗಡಿ ಭಾಗದ ಕೊನೆಯ ಪಂಚಾಯತ್ ಕೇಂದ್ರವಾಗಿರುವ ಇಲ್ಲಿ ಯಾರೂ ಹೇಳೋರು ಕೇಳೋರು ಇಲ್ಲಾ ಅನ್ನೋ ಕಾರಣಕ್ಕೆ ಕಚೇರಿಯ ಅಧಿಕಾರಿಗಳು ಯಾವಾಗಲೋ ಬರುವುದು, ಯಾವಾಗಲೂ ಹೋಗುವುದು ಮಾಡುತ್ತಿದ್ದಾರೆ..
ಸುಂದರ ಪಾಳ್ಯ ಗ್ರಾಮ ಪಂಚಾಯತಿ
ಆಂಧ್ರದ ಗಡಿ ಭಾಗದ ಕೊನೆಯ ಪಂಚಾಯತ್ ಕೇಂದ್ರವಾಗಿರುವ ಇಲ್ಲಿ ಯಾರೂ ಹೇಳೋರು ಕೇಳೋರು ಇಲ್ಲಾ ಅನ್ನೋ ಕಾರಣಕ್ಕೆ ಕಚೇರಿಯ ಅಧಿಕಾರಿಗಳು ಯಾವಾಗಲೋ ಬರುವುದು, ಯಾವಾಗಲೂ ಹೋಗುವುದು ಮಾಡುತ್ತಿದ್ದಾರೆ. ನಿತ್ಯ ಪಂಚಾಯತ್‌ಗೆ ಬರುವ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸಮಯಕ್ಕೆ ಸರಿಯಾಗಿ ಬಾರದ ಸುಂದರ ಪಾಳ್ಯ ಗ್ರಾಮ ಪಂಚಾಯತ್ ಪಿಡಿಒ ಕೇಶವರೆಡ್ಡಿ ವಿರುದ್ಧ ಸಾರ್ವಜನಿಕರು ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಅಮೀರ್ ಜಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.