ಕರ್ನಾಟಕ

karnataka

ETV Bharat / state

ಅನಾವಶ್ಯಕ ಹೋಂ ಕ್ವಾರಂಟೈನ್ ಆರೋಪ: ಆತ್ಮಹತ್ಯೆ ಬೆದರಿಕೆ ಹಾಕಿದ ಕೋಲಾರ ವ್ಯಕ್ತಿ! - ಕೋಲಾರದಲ್ಲಿ ಅನವಶ್ಯಕ ಹೋಂ ಕ್ವಾರಂಟೈನ್ ಆರೋಪದಿಂದ ಆತ್ಮಹತ್ಯೆ ಬೆದರಿಕೆ

ಅನಾವಶ್ಯಕವಾಗಿ ಕ್ವಾರಂಟೈನ್ ಮಾಡಿದ್ದಾರೆಂದು ಆರೋಪಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಘಟನೆ ಕೋಲಾರದಲ್ಲಿ ನಡೆದಿದೆ. ಮಾಲೂರು ಶಾಸಕ ಕೆ.ವೈ. ನಂಜೇಗೌಡ ಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ್ ಕುಟುಂಬಸ್ಥರ ಮನವೊಲಿಸಿದ್ದಾರೆ.

Suicide threat with unnecessary home quarantine accusation in kolar
ಅನವಶ್ಯಕ ಹೋಂ ಕ್ವಾರಂಟೈನ್ ಆರೋಪ

By

Published : Apr 22, 2020, 3:57 PM IST

ಕೋಲಾರ: ಹೋಂ ಕ್ವಾರಂಟೈನ್ ಮಾಡಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮಾಲೂರು ತಾಲೂಕಿನ ಸಂತೇಹಳ್ಳಿ ಗ್ರಾಮದ ಈ ವ್ಯಕ್ತಿಪೆಟ್ರೋಲ್ ಬಾಟಲ್ ಹಿಡಿದುಕೊಂಡು ಆತ್ಮಹತ್ಯೆಗೆ ಶರಣಾಗುವುದಾಗಿ ಹೇಳಿದ್ದಾನೆ.

ಬೆಂಗಳೂರಿನಿಂದ ಸಂಬಂಧಿಕರು ಈತನ ಮನೆಗೆ ಬಂದಿದ್ದರು. ಬಳಿಕ ಕೆಲವರು ಆಶಾ ಕಾರ್ಯಕರ್ತರಿಗೆ ತಿಳಿಸಿ ಕ್ವಾರಂಟೈನ್ ಮಾಡಲು ಸೂಚಿಸಿದ್ದರು. ಆಗ ಈ ವ್ಯಕ್ತಿ ಸೇರಿದಂತೆ ಈತನ ಕುಟುಂಬಸ್ಥರ ಫೋಟೊ ವೈರಲ್​ ಆಗಿದೆ. ಇವರಿಗೆ ಕೆಲವು ಕಿಡಿಗೇಡಿಗಳುಶಂಕಿತರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಅನಾವಶ್ಯಕ ಹೋಂ ಕ್ವಾರಂಟೈನ್ ಆರೋಪ... ಆತ್ಮಹತ್ಯೆ ಬೆದರಿಕೆ ಹಾಕಿದ ವ್ಯಕ್ತಿ

ಹೀಗಾಗಿ ತಮ್ಮನ್ನು ಅನಾವಶ್ಯಕವಾಗಿ ಕ್ವಾರಂಟೈನ್ ಮಾಡಿದ್ದಾರೆಂದು ಆರೋಪಿಸಿರುವ ಈ ಕುಟುಂಬ ಸದಸ್ಯರು, ಗ್ರಾಮ ಪಂಚಾಯತ್​ ಕಚೇರಿಗೆ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಕುಟುಂಬದ ವ್ಯಕ್ತಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಮಾಲೂರು ಶಾಸಕ ಕೆ.ವೈ. ನಂಜೇಗೌಡ, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸ್​ ಅಧಿಕಾರಿಗಳು ಆಗಮಿಸಿ ಇವರ ಕುಟುಂಬಸ್ಥರ ಮನವೊಲಿಸಿದ್ದಾರೆ.

ABOUT THE AUTHOR

...view details