ಕೋಲಾರ:ಗಣೇಶ ಮೆರವಣಿಗೆ ವೇಳೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದ ಪರಿಣಾಮ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ: ಗಣೇಶ ನಿಮಜ್ಜನ ವೇಳೆ ಕಿಡಿಗೇಡಿಗಳಿಂದ ಕಲ್ಲು ತೂರಾಟ - procession of Ganesh
ನಗರದ ಗಂಗಮ್ಮಪಾಳ್ಳದಿಂದ ಗಣೇಶ ಮೂರ್ತಿಯನ್ನು ನಿಮಜ್ಜನ ಮಾಡಲು ಮೆರವಣಿಗೆ ಮೂಲಕ ಬರುತ್ತಿದ್ದ ವೇಳೆ ಕಿಡಿಗೇಡಿಗಳಿಂದ ಗಣೇಶ ಮೂರ್ತಿ ಹಾಗೂ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಕೃತ್ಯ ಖಂಡಿಸಿ ಹಿಂದು ಸಂಘಟನೆ ಮುಖಂಡರು ನಗರದ ಇಟಿಸಿಎಂ ಸರ್ಕಲ್ ಬಳಿ ರಸ್ತೆ ತಡೆದು ಪ್ರತಿಭಟನೆ ಮಾಡಿದರು.
ರಾತ್ರಿ ನಗರದ ಅಮ್ಮವಾರಿಪೇಟೆ ಸರ್ಕಲ್ ಬಳಿ ಕಲ್ಲು ತೂರಾಟ ನಡೆದಿದ್ದು, ಗಂಗಮ್ಮಪಾಳ್ಳದಿಂದ ಗಣೇಶ ಮೂರ್ತಿಯನ್ನು ನಿಮಜ್ಜನ ಮಾಡಲು ಮೆರವಣಿಗೆ ಮೂಲಕ ಬರುತ್ತಿದ್ದ ವೇಳೆ ಕಿಡಿಗೇಡಿಗಳಿಂದ ಗಣೇಶ ಮೂರ್ತಿ ಹಾಗೂ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಕೃತ್ಯ ಖಂಡಿಸಿ ಹಿಂದು ಸಂಘಟನೆ ಮುಖಂಡರು ನಗರದ ಇಟಿಸಿಎಂ ಸರ್ಕಲ್ ಬಳಿ ರಸ್ತೆ ತಡೆದು ಪ್ರತಿಭಟನೆ ಮಾಡಿದರು.
ಸ್ಥಳಕ್ಕೆ ಬಂದ ಎಎಸ್ಪಿ ಜಾಹ್ನವಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿದರಾದ್ರು ಪ್ರಯತ್ನ ಸಫಲವಾಗಿಲ್ಲ, ಈ ವೇಳೆ ಸ್ಥಳಕ್ಕೆ ಬಂದ ಎಸ್ಪಿ ಕಾರ್ತಿಕ್ ರೆಡ್ಡಿ, ಕೂಡಲೇ ಎಫ್.ಐ.ಆರ್. ದಾಖಲು ಮಾಡಿ ಆರೋಪಿಗಳನ್ನು ಬಂಧಿಸುವ ಭರವಸೆ ಕೊಟ್ಟ ನಂತರ ಪ್ರತಿಭಟನೆ ಕೈಬಿಟ್ಟು ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.