ಕರ್ನಾಟಕ

karnataka

ETV Bharat / state

ಭಯೋತ್ಪಾದನೆ ಮಾಡುವವರನ್ನು ಬಿಡುವುದಿಲ್ಲ : ಆರಗ ಜ್ಞಾನೇಂದ್ರ - stone laying ceremony of rural police station held by home minister

ಮಳೆಯ ನಡುವೆಯೂ ಕೋಲಾರದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಶಂಕುಸ್ಥಾಪನೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ನೆರವೇರಿಸಿದರು. ಇದೇ ವೇಳೆ ಸಂಸದರಿಗೆ ಬೆದರಿಕೆ ಹಾಕಿದ ಕುರಿತು ಪ್ರತಿಕ್ರಿಯಿಸಿದ ಅವರು ಭಯೋತ್ಪಾದನೆ ಮಾಡುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

stone-laying-ceremony-of-rural-police-station-held-by-home-minister
ಭಯೋತ್ಪಾದನೆ ಮಾಡುವವರನ್ನು ಬಿಡುವುದಿಲ್ಲ : ಆರಗ ಜ್ಞಾನೇಂದ್ರ

By

Published : Mar 20, 2022, 11:01 PM IST

ಕೋಲಾರ ​:ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮಳೆರಾಯ ಅಡ್ಡಿಪಡಿಸಿದ್ದು, ಮಳೆಯ ನಡುವೆಯೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರು ಶಂಕುಸ್ಥಾಪನೆ ನರವೇರಿಸಿದರು.

ಇದೇ ವೇಳೆ ಮಾತನಾಡಿದ ಗೃಹ ಸಚಿವರು, ಕೋಲಾರದ ಕ್ಲಾಕ್ ಟವರ್ ಹಲವು ವರ್ಷಗಳಿಂದ‌ ಜನರ ಮಾನಸಿಕವಾಗಿ ನೆಮ್ಮದಿ ಕೆಡಿಸಿತ್ತು. ಇಂದು ಕ್ಲಾಕ್​ ಟವರ್ ವಿಷಯ ಶಾಂತಿಯುತವಾಗಿ ಬಗೆಹರಿದಿದೆ ಎಂದರು. ಸಾರ್ವಜನಿಕ ಸ್ಥಳದಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕು, ಬೇರೆ ಯಾವುದೇ ಧ್ವಜ‌ ಇರಬಾರದು. ಪೊಲೀಸರು, ಜಿಲ್ಲಾಡಳಿತ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕೆಲಸವನ್ನು ಮಾಡಿದ್ದಾರೆ. ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇನ್ಮುಂದೆ ಶಾಂತಿ ಸುವ್ಯವಸ್ಥೆ ಕದಡುವ ಕೆಲಸ ಆಗಬಾರದು ಎಂದು ಹೇಳಿದ್ದಾರೆ.

ಕೋಲಾರದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಶಂಕುಸ್ಥಾಪನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ..

ಸಂಸದರಿಗೆ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಭಯೋತ್ಪಾದನೆ ಮಾಡುವವರನ್ನು ನಾವು ಬಿಡುವುದಿಲ್ಲ. ಭಯ ಪಡಿಸುವುದು, ಬೆದರಿಕೆ ಹಾಕುವುದಾದರೆ ಅಂತಹವರಿಗೆ ಪೊಲೀಸ್ ಇಲಾಖೆಯ ಮೂಲಕ ಸರಿಯಾದ ಬುದ್ಧಿ ಕಲಿಸುತ್ತೇವೆ ಎಂದು ಖಡಕ್​ ಎಚ್ಚರಿಕೆ ನೀಡಿದರು.

ಸಂಸದ ಮುನಿಸ್ವಾಮಿ ಹಾಗೂ ಅವರ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಸಂಸದರ ದೂರವಾಣಿ ಕರೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಎಸ್ಪಿಗೆ ತಿಳಿಸಿದ್ದೇನೆ. ಈ ರೀತಿ ಭಯೋತ್ಪಾದನೆ ಮಾಡೋರನ್ನು ಸುಮ್ಮನೆ ಬಿಡುವುದಿಲ್ಲ ಎಂದರು.

ಓದಿ :ಶಿವಮೊಗ್ಗ: ತುಂಗಾ ನದಿಯಲ್ಲಿ ಜೋಡಿ ಮೃತದೇಹ ಪತ್ತೆ

ABOUT THE AUTHOR

...view details