ಗಂಗಾವತಿ:ಜೂನ್ 25ರಿಂದ ಜುಲೈ 4ರವರೆಗೆ ಶಿಕ್ಷಣ ಇಲಾಖೆ ಹತ್ತನೇ ತರಗತಿ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಸಿದ್ಧತೆ ಕೈಗೊಳ್ಳಲಾಗಿದ್ದು, ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ಹತ್ತನೇ ತರಗತಿ ಪರೀಕ್ಷೆಗೆ ಸಿದ್ಧತೆ: ಕೊಪ್ಪಳದಲ್ಲಿ ಎರಡು ಹೆಚ್ಚುವರಿ ಕೇಂದ್ರ ಸ್ಥಾಪನೆ - sslc exam news
ಲಾಕ್ಡೌನ್ ಆರಂಭವಾಗುವ ಮೊದಲು ಕೊಪ್ಪಳದ ಕನಕಗಿರಿ, ಕಾರಟಗಿ ಹಾಗೂ ಗಂಗಾವತಿ ತಾಲೂಕುಗಳಲ್ಲಿ ಒಟ್ಟು 20 ಕೇಂದ್ರಗಳನ್ನು ಸ್ಥಾಪಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದರು. ಆದರೀಗ 2 ಹೆಚ್ಚುವರಿ ಕೇಂದ್ರ ಸ್ಥಾಪಿಸಲು ಅಧಿಕಾರಿಗಳು ತೀರ್ಮಾನ ಕೈಗೊಂಡಿದ್ದಾರೆ.
![ಹತ್ತನೇ ತರಗತಿ ಪರೀಕ್ಷೆಗೆ ಸಿದ್ಧತೆ: ಕೊಪ್ಪಳದಲ್ಲಿ ಎರಡು ಹೆಚ್ಚುವರಿ ಕೇಂದ್ರ ಸ್ಥಾಪನೆ sslc-exam-prepartion](https://etvbharatimages.akamaized.net/etvbharat/prod-images/768-512-7460050-1040-7460050-1591182502463.jpg)
ಹತ್ತನೇ ತರಗತಿಯ ಪರೀಕ್ಷಾ ಸಿದ್ಧತೆ ಆರಂಭ
ಲಾಕ್ಡೌನ್ ಆರಂಭವಾಗುವ ಮೊದಲು ಕೊಪ್ಪಳದ ಕನಕಗಿರಿ, ಕಾರಟಗಿ ಹಾಗೂ ಗಂಗಾವತಿ ತಾಲೂಕುಗಳಲ್ಲಿ ಒಟ್ಟು 20 ಕೇಂದ್ರಗಳನ್ನು ಸ್ಥಾಪಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದರು.
ಹತ್ತನೇ ತರಗತಿ ಪರೀಕ್ಷೆಗೆ ಸಿದ್ಧತೆ
ಇದೀಗ ಕೊರೊನಾ ಸಮುದಾಯಕ್ಕೆ ಹರಡುವ ಭೀತಿ ಇರುವುದರಿಂದ ಸಾಮಾಜಿಕ ಅಂತರ ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆ ಎರಡು ಹೆಚ್ಚುವರಿ ಸಬ್ ಸೆಂಟರ್ಗಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಾಪಿಸಿದ್ದಾರೆ.