ಕರ್ನಾಟಕ

karnataka

ETV Bharat / state

ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಸಚಿವ ಶ್ರೀರಾಮುಲು - ಕೋಲಾರದಲ್ಲಿ ಸಚಿವ ಶ್ರೀರಾಮುಲು

ಸಚಿವರಾಗಿ ಪದಗ್ರಹಣ ಮಾಡಿದ ಏಳು ಸಚಿವರಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅಭಿನಂದನೆ ತಿಳಿಸಿದ್ದಾರೆ.

dot
ಶ್ರೀರಾಮುಲು

By

Published : Jan 13, 2021, 5:27 PM IST

ಕೋಲಾರ: ಹೊಸದಾಗಿ ಮಂತ್ರಿಗಳಾಗಿರುವ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹಾರೈಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮಂತ್ರಿ ಮಂಡಲದ ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ರು. ನಾಗೇಶ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾಗೇಶ್​ ಅವರ ಅಧಿಕಾರವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅಬಕಾರಿ ಸಚಿವರಾಗಿ ಉತ್ತಮ ಕಾರ್ಯ ಮಾಡಿರುವ ಅವರಿಗೆ ಒಳ್ಳೆಯದಾಗಲಿ ಎಂದರು. ಯಾವ ವಿಚಾರಕ್ಕಾಗಿ ಅವರು ರಾಜೀನಾಮೆ‌ ನೀಡಿದ್ದಾರೆಂದು ನನಗೆ ಗೊತ್ತಿಲ್ಲ. ಕಾರ್ಯಕ್ರಮಕ್ಕೆ ಅವರು ಗೈರಾದಾಗ ನನಗೆ ಆ ವಿಷಯ ತಿಳಿಯಿತು. ಪೂರ್ಣ ಮಾಹಿತಿ ಪಡೆದ ನಂತರ ಹಿರಿಯರೊಂದಿಗೆ ಮಾತನಾಡುವೆ ಎಂದರು.

ಅಧಿಕಾರ ಕಳೆದುಕೊಂಡ ಬಳಿಕ ಸಿದ್ದರಾಮಯ್ಯನವರಿಗೆ ಮತಿಭ್ರಮಣೆಯಾಗಿರಬಹುದು. ಹೀಗಾಗಿ ಅವರಿಗೆ ಸಿಎಂ‌ ಬದಲಾವಣೆಯದ್ದೇ ಚಿಂತೆಯಾಗಿದೆ ಎಂದು ವ್ಯಂಗ್ಯವಾಡಿದರು. ನಮ್ಮ ಪಕ್ಷದ ಬಗ್ಗೆ ಅವರು ಹೇಳಿಕೆಗಳನ್ನು ನೀಡುವುದಕ್ಕೆ ಅವರು ಬಿಜೆಪಿ ವಕ್ತಾರರಲ್ಲ ಎಂದು ಗುಡುಗಿದರು.

ABOUT THE AUTHOR

...view details