ಕೋಲಾರ: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಮತ ಹಾಕಿರುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ವಿರುದ್ದ ಮಾತಾಡಲು ಜೆಡಿಎಸ್ನವರಿಗೆ ಯಾವುದೇ ಹಕ್ಕಿಲ್ಲ. ನನ್ನ ವಿರುದ್ದ ಪ್ರತಿಭಟನೆ ಮಾಡಿದ್ದಾರೆ. ನನಗೆ ಅಭ್ಯಂತರ ಇಲ್ಲ ಎಂದರು.
ಇನ್ನು ಎಂಎಲ್‌ಸಿ ಗೋವಿಂದ್ ರಾಜು ವಿರುದ್ಧ ಕೂಡ ಅಸಮಾಧಾನ ವ್ಯಕ್ತಪಡಿಸಿದ ಅವರು, ಅವರು ಶಿರಸಿಯಲ್ಲಿದ್ದಾಗ ನನಗೆ ವರ್ಗಾವಣೆ ಮಾಡಿ ಅಂತ ನನ್ನ ಹಿಂದೆ ಬಿದ್ದಿದ್ದರು. ಅವರೂ ಕೂಡ ನನ್ನ ವಿರುದ್ಧ ಮಾತಾಡಿದ್ದಾರೆ ಎಂದರು.
ಓದಿ:ಶ್ರೀನಿವಾಸ್ ಗೌಡನಿಗೆ ಮಾನ ಮರ್ಯಾದೆ ಇದ್ದರೆ ರಿಸೈನ್ ಮಾಡಿ ರಾಜಕಾರಣ ಮಾಡಲಿ: ಹೆಚ್ಡಿಕೆ ವಾಗ್ದಾಳಿ
ನಾನು ಯಾವುದೇ ಪಕ್ಷಕ್ಕಾದರೂ ಹೋಗಬಹುದು. ಅದು ನನ್ನಹಕ್ಕು. ನಾನು ಕಾಂಗ್ರೆಸ್‌ನಲ್ಲಿ ಮೂರು ಬಾರಿ ಶಾಸಕ ನಾಗಿದ್ದೆ, ಧರಂಸಿಂಗ್ ಸರ್ಕಾರದಲ್ಲಿ ಮಂತ್ರಿಯಾಗಿದ್ದೆ. ಕುಮಾರ್ ಸ್ವಾಮಿಯವರು ನನಗೆ ಮಂತ್ರಿ ಮಾಡಲೇ ಇಲ್ಲ. ನನ್ನನ್ನ ಸರಿಯಾಗಿ ನಡೆಸಿಕೊಂಡಿಲ್ಲ. ಇನ್ನು ಅವರಿಗೆ ಅವರ ಕುಟುಂಬ ಮತ್ತು ಅವರ ಜಿಲ್ಲೆ ಮಾತ್ರ ಕಾಣುತ್ತೆ. ಅವರು ಡಿಕ್ಡೇಟರ್ ತರಹ ಮಾಡುತ್ತಾರೆ. ನನಗೆ ನನ್ನ ಕ್ಷೇತ್ರವೇ ಮುಖ್ಯ. ಅದಕ್ಕಾಗಿ ಪಕ್ಷ ಬಿಟ್ಟಿದ್ದೇನೆ ಎಂದು ಇದೇ ವೇಳೆ ಸಮಜಾಯಿಷಿ ಕೂಡಾ ಕೊಟ್ಟರು.
ಕೋಲಾರದಲ್ಲಿ ಅಭಿವೃದ್ಧಿ ಏನು ಮಾಡಬೇಕೆಂಬ ಪ್ರಯತ್ನ ಮುಂದುವರೆಸಿದ್ದೇನೆ. ಒಳ್ಳೆಯ ಕಾರ್ಯಕ್ರಮಗಳಿಗೆ ಅವಕಾಶ ಸಿಕ್ಕಾಗ ಕೆಲಸ ಮಾಡಿದ್ದೇನೆ. ಆಗ ಬಿ -ಪಾರಂ ನೀಡಲು ಜೆಡಿಎಸ್ಗೆ ಗತಿ ಇರಲಿಲ್ಲ. ಅದಕ್ಕಾಗಿ ನನಗೆ ಕೊಟ್ಟರು ಎಂದು ತಿಳಿಸಿದ್ರು. ನಜೀರ್ ಸಾಬ್, ಬೈರೇಗೌಡರು ನನ್ನ ಗುರುಗಳು. ನಾನು ಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಶಾಸಕರೂ ಆಗಿರಲಿಲ್ಲ. ಆ ಪಕ್ಷದಲ್ಲಿ ನನ್ನ ಸೀನಿಯಾರಿಟಿಗೆ ಬೆಲೆ ಕೊಡಲಿಲ್ಲ. ಮುಂದಿನ ಚುನಾವಣೆಯಲ್ಲಿ ನನಗೆ ಬಿಫಾರಂ ಕೊಡ್ತಾರೋ ಇಲ್ವೋ ಬೇಕಿಲ್ಲ. ಅದೀಗ ನನಗೆ ಮುಖ್ಯ ಅಲ್ಲ. ಈಗ ನಾನು ಕಾಂಗ್ರೆಸ್‌ನಲ್ಲಿ ಇದ್ದೇನೆ ಎಂದರು.