ಕರ್ನಾಟಕ

karnataka

ETV Bharat / state

ಕೊನೆ ಶ್ರಾವಣ ಶನಿವಾರ: ಚಿಕ್ಕತಿರುಪತಿಯ ವೆಂಕಟೇಶ್ವರನ ದರ್ಶನಕ್ಕೆ ಹರಿದುಬಂದ ಭಕ್ತ ಸಾಗರ - venkateshwara temple

ಕರ್ನಾಟಕದ ಚಿಕ್ಕತಿರುಪತಿಯೆಂದೇ ಖ್ಯಾತಿಪಡೆದ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕತಿರುಪತಿಯ ಅಭಯವೆಂಕಟರಮಣ ಸ್ವಾಮಿ ದೇವಾಲಯಗಳಲ್ಲಿ ಕೊನೆ ಶ್ರಾವಣ ಶನಿವಾರ ಪ್ರಯುಕ್ತ ವಿಶೇಷ ಪೂಜೆ ಅಭಿಷೇಕ ಮಾಡಲಾಯಿತು.

ಅಭಯವೆಂಕಟರಮಣ ಸ್ವಾಮಿ

By

Published : Aug 25, 2019, 6:56 AM IST

ಕೋಲಾರ :ಶ್ರಾವಣ ಮಾಸ ಅಂದ್ರೆ ಹಬ್ಬಗಳ ಮಾಸ, ಸಮೃದ್ದಿಯ ಮಾಸ, ಶುಭ ನಕ್ಷತ್ರಗಳ ಮಾಸ,ಎಂದು ಹೇಳಲಾಗುತ್ತದೆ. ಹಾಗಾಗಿ ಶ್ರಾವಣ ಮಾಸದ ನಾಲ್ಕನೇ ಶನಿವಾರ ದೇವಾಲಯಗಳಲ್ಲಿ ಅದರಲ್ಲೂ ವೆಂಕಟೇಶ್ವರಸ್ವಾಮಿಯ ದೇವಾಲಯಗಳಲ್ಲಿ ಭಕ್ತ ಸಾಗರವೇ ಹರಿದು ಬಂದಿತ್ತು. ವೆಂಕಟೇಶ್ವರನ ಭಕ್ತಿಯಲ್ಲಿ ಮಿಂದೆದ್ದು ಭಕ್ತರು ಏಳುಕುಂಡಲವಾಡ ವೆಂಕಟರಮಣ ಗೋವಿಂದ ಗೋವಿಂದ ಅಂಥ ಸ್ಮರಣೆ ಮಾಡ್ತಿದ್ರು..

ಕೊನೆ ಶ್ರಾವಣ ಶನಿವಾರ ಪ್ರಯುಕ್ತ ಚಿಕ್ಕತಿರುಪತಿಯಲ್ಲಿ ವಿಶೇಷ ಪೂಜೆ

ಕರ್ನಾಟಕದ ಚಿಕ್ಕತಿರುಪತಿಯೆಂದೇ ಖ್ಯಾತಿಪಡೆದ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯ ಅಭಯವೆಂಕಟರಮಣ ಸ್ವಾಮಿ ದೇವಾಲಯಗಳದಲ್ಲಿ ಮುಂಜಾನೆ ಐದು ಗಂಟೆಯಿಂದಲೇ ವಿಶೇಷ ಪೂಜೆ ಅಭಿಷೇಕಗಳು ನಡೆದವು. ಅಲ್ಲದೆ ಲಕ್ಷಾಂತ ಜನ ಭಕ್ತರ ಅಭಯವೆಂಕಟರಮಣಸ್ವಾಮಿ ದರ್ಶನ ಪಡೆದಿದ್ದಾರೆ.

ಆಂಧ್ರದ ತಿರುಮಲ -ತಿರುಪತಿಗೆ ಹೋಗಲಾರದವರು ಮಾಲೂರಿನ ಚಿಕ್ಕತಿರುಪತಿಗೆ ಬಂದು ಅಭಯ ವೆಂಕಟರಮಣಸ್ವಾಮಿಯ ದರ್ಶನ ಪಡೆಯುತ್ತಾರೆ. ಅದ್ರಂತೆ ಎಂ.ಪಿ ಮುನಿಸ್ವಾಮಿ ಹಾಗೂ ನೂತನ ಮಂತ್ರಿಗಳಾದ ಎಚ್.ನಾಗೇಶ್ ಅವರು ದೇವಾಲಯಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಇನ್ನು ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಇಂದು ದೇವಾಲಯದಲ್ಲಿ ವಿಶೇಷ ಭದ್ರತೆ ಹಾಗೂ ನೀರು ಇನ್ನಿತರ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ABOUT THE AUTHOR

...view details