ಕರ್ನಾಟಕ

karnataka

ETV Bharat / state

ವರ್ತೂರ್ ಪ್ರಕಾಶ್ ರಾಜಕೀಯ ವರಸೆ: ಪಂಚಾಯಿತಿ ಚುನಾವಣೆಯಲ್ಲಿ ಗೆದ್ದವರಿಗೆ ಅಭಿನಂದನೆ-ಬಾಡೂಟ - special food arrengement in kolara

ಕೋಲಾರ ವಿಧಾನಸಭೆ ವ್ಯಾಪ್ತಿಯ 19 ಗ್ರಾಮ‌ ಪಂಚಾಯಿತಿಯಲ್ಲಿ 15 ಪಂಚಾಯಿತಿ ತಮ್ಮ ವಶಕ್ಕೆ ಬಂದಿವೆ. ‌ಎಲ್ಲ ಪಂಚಾಯಿತಿಗಳಲ್ಲಿ ನಮ್ಮ ಮತಗಳ ಸಂಖ್ಯೆ ಹೆಚ್ಚಾಗಿದ್ದು, ಮುಂದೆ‌ ಇದು ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ತಿಳಿಸಿದ್ದಾರೆ.

special food arrengement in kolara
ಪಂಚಾಯಿತಿ ಚುನಾವಣೆಯಲ್ಲಿ ಗೆದ್ದವರು

By

Published : Jan 3, 2021, 11:00 PM IST

ಕೋಲಾರ: ಮಾಜಿ ಸಚಿವ ವರ್ತೂರ್ ಪ್ರಕಾಶ್ ಅವರ ನಿವಾಸದ ಬಳಿ ಗ್ರಾಮ‌ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ತಮ್ಮ ಬೆಂಬಲಿಗರಿಗೆ ಅಭಿನಂದನೆ ಮತ್ತು ಭರ್ಜರಿ‌ ಬಾಡೂಟ‌ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಈ ಕುರಿತು ಮಾತನಾಡಿದ ವರ್ತೂರ್​ ಪ್ರಕಾಶ್,​ ಕೋಲಾರ ವಿಧಾನಸಭೆ ವ್ಯಾಪ್ತಿಯ 19 ಗ್ರಾಮ‌ ಪಂಚಾಯಿತಿಯಲ್ಲಿ 15 ಪಂಚಾಯ್ತಿಗಳು ತಮ್ಮ ವಶಕ್ಕೆ ಬಂದಿದೆ. ‌ಎಲ್ಲ ಪಂಚಾಯಿತಿಗಳಲ್ಲಿ ನಮ್ಮ ಮತಗಳ ಸಂಖ್ಯೆ ಹೆಚ್ಚಾಗಿದ್ದು, ಮುಂದೆ‌ ಇದು ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.

ವರ್ತೂರ್ ಪ್ರಕಾಶ್

ಓದಿ:ನಾಳೆಯಿಂದ ಎರಡು ದಿನಗಳ ಕಾಲ ಶಾಸಕರ ಜೊತೆ ಸಿಎಂ ಸಭೆ

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆರ್ಥಿಕ ನೆರವು ನೀಡಿದ ಕಾಂಗ್ರೆಸ್​ ಪಕ್ಷ ಹಾಗೂ ಕೆ. ಹೆಚ್.​ ಮುನಿಯಪ್ಪರಿಗೆ ಧನ್ಯವಾದ ಹೇಳಿದ ಅವರು, ತಾವು ಕಾಂಗ್ರೆಸ್​​ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದರು.

ಜಿಲ್ಲೆಯ 19 ಗ್ರಾಮ‌ ಪಂಚಾಯಿತಿಗಳಲ್ಲಿ ಗೆಲುವು ಸಾಧಿಸಿದ ಸುಮಾರು 202 ಬೆಂಬಲಿತ ಸದಸ್ಯರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಇನ್ನು‌ ಕಾರ್ಯಕ್ರಮಕ್ಕೆ‌ ಆಗಮಿಸಿದ ಸುಮಾರು 2,000 ಮಂದಿಗೆ 500 ಕೆಜಿ ಚಿಕನ್ ಮತ್ತು 500 ಕೆಜಿ ಮಟನ್ ಬಿರಿಯಾನಿ ಮಾಡಿಸಲಾಗಿತ್ತು.

ABOUT THE AUTHOR

...view details