ಕೋಲಾರ : ರಾಜಕಾರಣ ತುಂಬಾ ಕೆಳಮಟ್ಟಕ್ಕೆ ತಲುಪಿದೆ. ಸಾರ್ವಜನಿಕ ಜೀವನಕ್ಕೆ ಮೂರು ಕಾಸು ಮರ್ಯಾದೆ ಉಳಿದಿಲ್ಲ. ಸುಮ್ಮನೆ ನಮ್ಮನ್ನ ಕೆಣಕಬೇಡಿ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಿದ ಮಾಧ್ಯಮದವರ ಎದುರೇ ಸ್ಪೀಕರ್ ಗರಂ ಆಗಿದ್ದಾರೆ.
ಯಾರ್‌ರೀ ರಮೇಶ್ ಜಾರಕಿಹೊಳಿ, ಏನ್ ಮಾತಾಡ್ತೀರಿ.. ನಿಮ್ಗೆ ಕನ್ನಡ ಅರ್ಥ ಆಗಲ್ವಾ..- 'ಸ್ಪೀಕರ್' ಗರಂ.. - Kannada news
ರಮೇಶ್ ಜಾರಕಿಹೊಳಿ ನನ್ನ ಬಳಿ ಬಂದಿಲ್ಲ, ರಾಜೀನಾಮೆ ಪತ್ರವನ್ನೂ ಸಹ ಕಳುಹಿಸಿಲ್ಲ. ಅವರು ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ರೇ, ಅದು ಅವರಿಗೆ ಕೇಳಿ. ಯಾರ್ಯಾರೋ ಹೇಳಿಕೆಗೆ ನಾನ್ಯಾಕೆ ಉತ್ತರ ಕೊಡ್ಬೇಕು ಎಂದು ಸ್ಪೀಕರ್ ರಮೇಶ್ ಕುಮಾರ ಮಾಧ್ಯಮದ ಎದುರು ಗರಂ ಆಗಿದ್ದಾರೆ.
![ಯಾರ್‌ರೀ ರಮೇಶ್ ಜಾರಕಿಹೊಳಿ, ಏನ್ ಮಾತಾಡ್ತೀರಿ.. ನಿಮ್ಗೆ ಕನ್ನಡ ಅರ್ಥ ಆಗಲ್ವಾ..- 'ಸ್ಪೀಕರ್' ಗರಂ..](https://etvbharatimages.akamaized.net/etvbharat/prod-images/768-512-3722577-thumbnail-3x2-ramesh.jpg)
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮಾತನಾಡಿದ ಅವರು, ಶಾಸಕ ಆನಂದ್ ಸಿಂಗ್ ರಾಜೀನಾಮೆ ಪತ್ರ ನನಗೆ ಬಂದಿದೆ. ಆ ಪತ್ರವನ್ನ ನನ್ನ ಕಚೇರಿಗೆ ಕಳುಹಿಸಿದ್ದೇನೆ. ನಾನು ಕಚೇರಿಗೆ ಹೋದ ನಂತರ ನಿಯಮಾನುಸಾರ ಕ್ರಮ ತೆಗೆದುಕೊಳ್ಳುತ್ತೇನೆಂದರು.
ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಮೇಲೆ ಗರಂ ಆದ ಸ್ಪೀಕರ್, ರಮೇಶ್ ಜಾರಕಿಹೊಳಿ ನನ್ನ ಬಳಿ ಬಂದಿಲ್ಲ. ರಾಜೀನಾಮೆ ಪತ್ರವನ್ನೂ ಸಹ ಕಳುಹಿಸಿಲ್ಲ. ಅವರು ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ರೇ, ಅದು ಅವರಿಗೆ ಬಿಟ್ಟ ವಿಚಾರ. ಯಾರ್ಯಾರೋ ಹೇಳಿಕೆಗೆ ನಾನ್ಯಾಕೆ ಉತ್ತರ ಕೊಡಬೇಕು, ಯಾರ್ಯಾರ ಜೊತೆಗೋ ತಾಳೆ ಹಾಕಿದ್ರೇ ಅದು ನಿಮ್ಮ ತಪ್ಪು ಎಂದು ಪ್ರತಿಕ್ರಿಯಿಸಿದ್ರು.ಸಾರ್ವಜನಿಕ ಜೀವನಕ್ಕೆ ಈಗ ಮೂರು ಕಾಸು ಮರ್ಯಾದೆ ಉಳಿದಿಲ್ಲ. ಸುಮ್ಮನೆ ನಮ್ಮನ್ನ ಕೆಣಕಬೇಡಿ. ಸಾಯುವಾಗ ಗೌರವಯುತವಾಗಿ ಸಾಯಬೇಕು ಎಂದು ಆಸೆಪಡುತ್ತಿದ್ದೇನೆ ಎಂದು ಮಾಧ್ಯಮದವರ ಮೇಲೆ ರಮೇಶ್ ಕುಮಾರ್ ಗರಂ ಆದರು.