ಕೋಲಾರ:ಷೇರು ಮಾರುಕಟ್ಟೆ ಏರಿಳಿತದಿಂದ ಸಾಲದ ಹೊರೆಯಾಗಿ ಹಾಗೂ ಕೌಟುಂಬಿಕ ಕಲಹ ಹೀಗೆ ಒಂದರ ಮೇಲೊಂದು ಒತ್ತಡ ತಡೆಯಲಾರದೆ ಬಿಹಾರ ಮೂಲದ ಟೆಕ್ಕಿಯೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರ ತಾಲೂಕು ಚುಂಚದೇನಹಳ್ಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.
ಸಾಲವೇ ಶೂಲವಾಯ್ತಾ? ಗುಂಡು ಹಾರಿಸಿಕೊಂಡು ಟೆಕ್ಕಿ ಆತ್ಮಹತ್ಯೆಗೆ ಶರಣು! - Bengalore mahadevpura
ಕೋಲಾರ ಜಿಲ್ಲೆಯ ಚುಂಚದೇನಹಳ್ಳಿ ಬಳಿ ಬಿಹಾರ ಮೂಲದ ಸಾಫ್ಟ್‌ವೇರ್ ಉದ್ಯೋಗಿ ಸಾಲಬಾಧೆ ತಾಳಲಾರದೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಬೆಂಗಳೂರು ಮದೇವಪುರ ನಿವಾಸಿ, ಬಿಹಾರ ಮೂಲದ ಪ್ರಶಾಂತ್ ಕುಮಾರ್ ಎಂಬಾತ ರಾಷ್ಟ್ರೀಯ ಹೆದ್ದಾರಿ-75 ಚುಂಚದೇನಹಳ್ಳಿ ಬಸ್ ನಿಲ್ದಾಣದ ಹಿಂಭಾಗ ಡೆತ್ ನೋಟ್ ಬರೆದಿಟ್ಟು, ರಿವಲ್ವಾರ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನಿಂದ ತನ್ನ ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ಬಂದಿರುವ ಪ್ರಶಾಂತ್ ಕುಮಾರ್ ಅಲ್ಲೇ ಬೈಕ್ ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಎಸ್ಪಿ ಕಾರ್ತಿಕ್ ರೆಡ್ಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪ್ರಶಾಂತ್ ಕುಮಾರ್ ಬರೆದಿಟ್ಟ ಡೆತ್ ನೋಟ್ ಸಿಕ್ಕಿದ್ದು, ಅದನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಆತ್ಮಹತ್ಯೆಗೆ ಕಾರಣ ಏನು ಅನ್ನೋದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಇನ್ನು ಘಟನೆ ತಿಳಿಯುತ್ತಿದ್ದಂತೆ ಮೃತ ಪ್ರಶಾಂತ್ ಕುಮಾರ್ನ ಸಂಬಂಧಿಕರಿಗೆ ಮಾಹಿತಿ ನೀಡಿ ಅವರನ್ನು ಕರೆಸಿದ್ದಾರೆ. ಜೊತೆಗೆ ಅವರ ಸಮ್ಮುಖದಲ್ಲೇ ಮೃತದೇಹವನ್ನು ಪೋಸ್ಟ್ಮಾರ್ಟ್ಮ್ಗೂ ಕಳಿಸಲಾಗಿದೆ. ಡೆತ್ ನೋಟ್ ಪ್ರಕಾರ ಮೇಲ್ನೋಟಕ್ಕೆ ಪ್ರಶಾಂತ್ ಆತ್ಮಹತ್ಯೆಗೆ ಅತಿಯಾದ ಸಾಲ ಅನ್ನೋದು ತಿಳಿದು ಬಂದಿದೆ. ಸಾಪ್ಟ್ವೇರ್ ಕಂಪನಿಯ ಉದ್ಯೋಗಿಯಾಗಿದ್ದ ಪ್ರಶಾಂತ್ ಷೇರು ಮಾರುಟ್ಟೆಯಲ್ಲೂ ಹೂಡಿಕೆ ಮಾಡಿದ್ರು. ಅದರಲ್ಲೂ ಲಾಸ್ ಆಗಿ, ಕೆಲಸ ಕಳೆದುಕೊಂಡು ಆರು ತಿಂಗಳಿಂದ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.