ಕರ್ನಾಟಕ

karnataka

ETV Bharat / state

ಆಕ್ಸಿಜನ್ ಸಿಗದೇ ಐವರು ಮೃತಪಟ್ಟ ಪ್ರಕರಣ: ನ್ಯಾಯಕ್ಕಾಗಿ ಸಾಮಾಜಿಕ ಕಾರ್ಯಕರ್ತನಿಂದ ಹೈಕೋರ್ಟ್ ಮೊರೆ - ಆಮ್ಲಜನಕ ಕೊರತೆ

ಇ - ಮೇಲ್ ಮೂಲಕ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ರಾಜಣ್ಣ, ಘಟನೆಯ ಸಮಗ್ರ ತನಿಖೆ ನಡೆಸಿ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

social-worker-who-filed-petition-to-high-court-in-oxygen-tragedy
ನ್ಯಾಯಕ್ಕಾಗಿ ಸಾಮಾಜಿಕ ಕಾರ್ಯಕರ್ತನಿಂದ ಹೈಕೋರ್ಟ್ ಮೊರೆ

By

Published : Apr 29, 2021, 7:11 PM IST

ಕೋಲಾರ: ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಐವರು ಮೃತಪಟ್ಟಿದ್ದ ಪ್ರಕರಣ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. 5 ಜೀವಗಳಿಗೆ ಹೊಣೆ ಯಾರೂ ಹಾಗೂ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಹೈಕೋರ್ಟ್ ನ್ಯಾಯಾಧೀಶರಿಗೆ ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಎಂಬುವವರು ದೂರು ನೀಡಿದ್ದಾರೆ.

ಇ-ಮೇಲ್ ಮೂಲಕ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ರಾಜಣ್ಣ, ಘಟನೆಯ ಸಮಗ್ರ ತನಿಖೆ ನಡೆಸಿ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಇದೇ ತಿಂಗಳ-25ರಂದು ರಾತ್ರಿ ಆಕ್ಸಿಜನ್ ವ್ಯತ್ಯಯದಿಂದ ಐವರು ಸಾವನ್ನಪ್ಪಿದರು. ಹೀಗಾಗಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳ ವಿರುದ್ಧ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ರಾಜಣ್ಣ, ಪರಿಹಾರ ನೀಡಿ ನ್ಯಾಯ ಕೊಡಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಆಕ್ಸಿಜನ್ ಸಿಗದೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಸಾವು: ಕುಟುಂಬಸ್ಥರ ಆರೋಪ

ABOUT THE AUTHOR

...view details