ಕೋಲಾರ :ಬ್ಯಾಂಕ್ ಮುಂದೆ ಸಾಲಿನಲ್ಲಿ ನಿಂತಿದ್ದ ಜನರಿಗೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಥರ್ಮಲ್ ಸ್ಕ್ರೀನಿಂಗ್ ಮಾಡುವ ಮೂಲಕ ದೈಹಿಕ ಉಷ್ಣತೆ ಪರೀಕ್ಷೆ ಮಾಡಿದರು.
ಬ್ಯಾಂಕ್ ಮಂದೆ ನಿಂತಿದ್ದ ಜನರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಿದ ಶಾಸಕ ನಾರಾಯಣಸ್ವಾಮಿ - ಕೊವಿಡ್-19
ಅಲ್ಲದೆ ಮನೆಯಿಂದ ಹೊರಗೆ ಬರುವಾಗ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಸಲಹೆ ನೀಡಿದರು.
ಶಾಸಕ ನಾರಾಯಣಸ್ವಾಮಿ
ನಗರದ ಬಂಗಾರಪೇಟೆ ಪಟ್ಟಣದ ಕುವೆಂಪು ವೃತ್ತದ ಬ್ಯಾಂಕ್ ಮುಂದೆ ಜನ್‌ಧನ್ ಹಣ ಪಡೆಯುವ ಸಲುವಾಗಿ ಸಾಲುಗಟ್ಟಿ ಜನರು ನಿಂತಿದ್ದರು. ಸ್ಥಳಕ್ಕೆ ಆಗಮಿಸಿದ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಾರೆಡ್ಡಿ ಥರ್ಮಲ್ ಸ್ಕ್ರೀನಿಂಗ್ ಹಿಡಿದು ಕ್ಯೂನಲ್ಲಿ ನಿಂತಿದ್ದ ಜನರ ಉಷ್ಣತೆ ಪರೀಕ್ಷೆ ಮಾಡಿದರು.
ಅಲ್ಲದೆ ಮನೆಯಿಂದ ಹೊರಗೆ ಬರುವಾಗ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಸಲಹೆ ನೀಡಿದರು.
Last Updated : Apr 10, 2020, 7:18 PM IST