ಕೋಲಾರ:ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳನ್ನ ಪೊಲೀಸರು ರಕ್ಷಣೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರದಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 16 ಹಸುಗಳ ರಕ್ಷಣೆ - ಕಸಾಯಿಖಾನೆಗೆ ಹಸು ಸಾಗಾಟ ಸುದ್ದಿ
ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 16 ಹಸುಗಳನ್ನ ಕೋಲಾರ ಪೊಲೀಸರು ರಕ್ಷಿಸಿದ್ದಾರೆ.
ಹಸುಗಳ ರಕ್ಷಣೆ
ಕೋಲಾರ ಗ್ರಾಮಾಂತರ ಠಾಣಾ ಪೊಲೀಸರಿಂದ ಹಸುಗಳನ್ನ ರಕ್ಷಣೆ ಮಾಡಲಾಗಿದ್ದು, ಕೋಲಾರ ತಾಲೂಕಿನ ವೀರಾಪುರ ಗ್ರಾಮದ ಬಳಿ ಪೊಲೀಸರು ಹಸುಗಳನ್ನ ವಶಕ್ಕೆ ಪಡೆದಿದ್ದಾರೆ. ಶ್ರೀನಿವಾಸಪುರದಿಂದ ಬೆಂಗಳೂರಿನ ಕಸಾಯಿಖಾನೆಗಳಿಗೆ ಎರಡು ಈಚರ್ ವಾಹನಗಳಲ್ಲಿ ಸುಮಾರು 16 ಹಸುಗಳನ್ನ ಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.