ಕರ್ನಾಟಕ

karnataka

ETV Bharat / state

ಬೆಂಗಳೂರಿನಿಂದ ಕೋಲಾರಕ್ಕೆ ಬಂದ ಒಂದೇ ಕುಟುಂಬದ ಆರು ಸದಸ್ಯರು ಹೋಂ ಕ್ವಾರಂಟೈನ್​ - ಬೆಂಗಳೂರಿನಿಂದ ಬಂದಿದ್ದ ಒಂದೇ ಕುಟುಂಬದ ಆರು ಮಂದಿ

ಬೆಂಗಳೂರಿನಿಂದ ಬಂದಿದ್ದ ಒಂದೇ ಕುಟುಂಬದ ಆರು ಮಂದಿಯನ್ನ ಹೋಂ ಕ್ವಾರಂಟೈನ್​​ನಲ್ಲಿ ಇರಿಸಲಾಗಿದೆ‌.

six-of-the-same-family-are-home-quarantine
ಒಂದೇ ಕುಟುಂಬದ ಆರು ಸದಸ್ಯರು ಹೋಂ ಕ್ವಾರಂಟೈನ್​..

By

Published : Apr 24, 2020, 4:00 PM IST

ಕೋಲಾರ:ಜಿಲ್ಲೆಯ ಕೆಜಿಎಫ್ ತಾಲೂಕಿನ ಬಡಮಾಕನಹಳ್ಳಿ ಗ್ರಾಮದಲ್ಲಿ ಬೆಂಗಳೂರಿನಿಂದ ಬಂದಿದ್ದ ಆರು ಮಂದಿಯನ್ನ ಹೋಂ ಕ್ವಾರಂಟೈನ್​ ಮಾಡಲಾಗಿದೆ.

ಇನ್ನು ಇದೇ ಜಿಲ್ಲೆಯವರಾದ ಇವರು ಬೆಂಗಳೂರಿನ ಬನಶಂಕರಿಯಲ್ಲಿ ವಾಸವಿದ್ದು, ನಿನ್ನೆ ಕೋಲಾರದ ಬಡಮಾಕನಹಳ್ಳಿ ಸ್ವಗ್ರಾಮಕ್ಕೆ ಆಗಮಿಸಿದ್ರು. ಇನ್ನು ಬೆಂಗಳೂರಿನಲ್ಲಿ ಊಟ, ಕುಡಿಯುವ ನೀರಿಗೆ ಸಮಸ್ಯೆ ಇದ್ದ ಕಾರಣ ಊರಿಗೆ ಬಂದಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ಒಂದೇ ಕುಟುಂಬದ ಆರು ಸದಸ್ಯರಿಗೆ ಹೋಂ ಕ್ವಾರಂಟೈನ್​

ಇವರು ಬನಶಂಕರಿ ರೆಡ್ ಝೋನ್ ಪ್ರದೇಶದಿಂದ ಬಂದಿರುವ ಕಾರಣ ಆರೋಗ್ಯ ಇಲಾಖೆ ಅಧಿಕಾರಿಗಳು ಇಂದು ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ರು. ಜೊತೆಗೆ ಆರು ಮಂದಿಯ ರಕ್ತದ ಮಾದರಿ ಹಾಗೂ ಗಂಟಲು ದ್ರವ ಪರೀಕ್ಷೆ ನಡೆಸಿರುವ ಅಧಿಕಾರಿಗಳು, ಕುಟುಂಬಸ್ಥರನ್ನ ಹೋಂ ಕ್ವಾರಂಟೈನ್​ನಲ್ಲಿ ಇರಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details