ಕರ್ನಾಟಕ

karnataka

ETV Bharat / state

ಸರ್ಕಾರದ ಪ್ಯಾಕೇಜ್​ ಒಂದು ಎಕರೆಗೆ ಔಷಧಿ ಹೊಡೆಯಲೂ ಸಾಕಾಗಲ್ಲ: ಸಿದ್ದರಾಮಯ್ಯ ಟೀಕೆ - ಔಷಧ

ಸರ್ಕಾರ ಘೋಷಿಸಿರುವ ಕೊರೊನಾ ಪ್ಯಾಕೇಜ್​ ಯಾವುದಕ್ಕೂ ಸಾಲುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

siddaramaiah visits to kolar
ಸಿದ್ದರಾಮಯ್ಯ ಟೀಕೆ

By

Published : May 6, 2020, 8:15 PM IST

ಕೋಲಾರ: ರಾಜ್ಯ ಸರ್ಕಾರ ರೈತರಿಗೆ ಘೋಷಣೆ ಮಾಡಿರುವ ಪ್ಯಾಕೇಜ್ ಒಂದು ಎಕರೆಗೆ ಒಂದು ಬಾರಿ ಔಷಧ ಹೊಡೆಯಲೂ ಸಾಕಾಗುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋಲಾರದಲ್ಲಿ ದಿನಸಿ ಕಿಟ್​​ ವಿತರಣೆ
ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿ ಮಾಲೂರು ಶಾಸಕ ಕೆ.ವೈ‌.ನಂಜೇಗೌಡ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಮಾತನಾಡಿದ್ರು‌. ಕೊರೊನಾ ವಾರಿಯರ್ಸ್​ಗೆ ದಿನಸಿ ಕಿಟ್ ವಿತರಣೆ ಹಾಗೂ ಮಹಿಳಾ ವಾರಿಯರ್ಸ್​ಗೆ ಅರಿಶಿಣ, ಕುಂಕುಮ ಹಾಗೂ ಸೀರೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಸಂಪ್ರದಾಯ ವೃತ್ತಿ ಮಾಡುವವರು ಹಾಗೂ ಕರಕುಶಲ ಕಾರ್ಮಿಕರ ಸಭೆ ನಡೆಸಿ, ‌ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ ಎಂದರು.

ಈ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಎಕನಾಮಿಕ್​​ ಪ್ಯಾಕೇಜ್ ಘೋಷಣೆ ಮಾಡುವಂತೆ ಪತ್ರ ಬರೆಯಲಾಗಿದೆ.

ಇನ್ನು ಸವಿತ ಸಮಾಜ, ಅಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ‌, ಮಡಿವಾಳ ಸಮಾಜ, ನೇಕಾರರಿಗೆ 5 ಸಾವಿರ ರೂ. ನೆರವು ನೀಡುವ ಪ್ಯಾಕೇಜ್ ಒಳ್ಳೆಯದೇ. ಆದ್ರೆ ಸಾಕಷ್ಟು ಜನರನ್ನ ಪ್ಯಾಕೇಜ್​ನಿಂದ ಕೈ ಬಿಟ್ಟಿದ್ದಾರೆ ಎಂದರು. ಹೀಗಾಗಿ ಪ್ಯಾಕೇಜ್​ನಿಂದ ಬಿಟ್ಟಿರುವವರಿಗೂ ಕೂಡ ಆರ್ಥಿಕ ಸಹಾಯ ಮಾಡಬೇಕೆಂದು ಆಗ್ರಹಿಸಿದ್ರು.

ಇನ್ನು ಕೋಲಾರ ಜಿಲ್ಲೆ ಸೇರಿದಂತೆ ಹಲವೆಡೆ ರೈತರು ಸಂಕಷ್ಟದಲ್ಲಿದ್ದು, ಸರ್ಕಾರ ನೆರವಿಗೆ ಧಾವಿಸಬೇಕು. ಜೊತೆಗೆ ಸರ್ಕಾರ ಘೋಷಣೆ ಮಾಡಿರುವ ಎಕನಾಮಿಕ್ ಪ್ಯಾಕೇಜ್ ಏನೇನೂ ಸಾಲದು ಎಂದರು. ಇನ್ನು ಈ ಕುರಿತು ಒಂದು ಸಭೆ ಕರೆದು ಮತ್ತಷ್ಟು ಒತ್ತಾಯ ಮಾಡಲಾಗುವುದು ಎಂದು ತಿಳಿಸಿದ್ರು. ಇನ್ನು ಸರ್ಕಾರದ ಮುಂದೆ ಸುಮಾರು 21 ಬೇಡಿಕೆಗಳನ್ನ ಇಟ್ಟಿದ್ದೇವೆ. ಎಲ್ಲಾ ರೀತಿಯ ಕಾರ್ಮಿಕರಿಗೂ ಸಹಾಯ ಮಡುವಂತೆ ಒತ್ತಾಯ ಸಹ ಮಾಡಿದ್ದೇವೆ ಎಂದರು. ಇನ್ನು ಈಗಾಗಲೇ ಸರ್ಕಾರ ಘೋಷಣೆ ಮಾಡಿರುವ ಪರಿಹಾರವನ್ನ ತಡ ಮಾಡದೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ರು‌.

ABOUT THE AUTHOR

...view details