ಕರ್ನಾಟಕ

karnataka

ETV Bharat / state

ಮಾತು ಮಾತಿಗೂ ಮಣ್ಣಿನ ಮಕ್ಕಳು ಅನ್ನೋರು 2 ನೀರಾವರಿ ಯೋಜನೆಗೆ ಅಡ್ಡಿಪಡಿಸಿದ್ರು : ಸಿದ್ದರಾಮಯ್ಯ - ಜೆಡಿಎಸ್​​ ವಿರುದ್ಧ ಸಿದ್ದರಾಮಯ್ಯ ಟೀಕೆ

ನೆನಗುದಿಗೆ ಬಿದ್ದಿರುವ ಎತ್ತಿನಹೊಳೆ ಯೋಜನೆಯನ್ನು ಮತ್ತೆ ನಮ್ಮ ಸರ್ಕಾರ ಬಂದ ಮೇಲೆ‌ ಮಾಡಿ ಕೊಡ್ತೀವಿ, ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲವನ್ನೂ ಮಾಡಿ ಕೊಡ್ತೀವಿ ಎಂದ್ರು‌. ಬಿಜೆಪಿ ಸರ್ಕಾರ ಬಂದ ಮೇಲೆ ಅವರ ಬಳಿ ಹಣವಿಲ್ಲ. ‌ನಮ್ಮ ಕಾಲದಲ್ಲಿ ಕೊಡುತ್ತಿದ್ದ ಅಕ್ಕಿ ಕಡಿತ ಮಾಡಿದ್ದಾರೆ, ಅವರಿಗೆ ಸಕ್ಕರೆ ಕಾಯಿಲೆ ಇರಬೇಕು ಎಂದು ಸಚಿವ ಉಮೇಶ್ ಕತ್ತಿ ವಿರುದ್ಧ ವ್ಯಂಗ್ಯವಾಡಿದ್ರು..

siddaramaiah
ವಿಪಕ್ಷ ನಾಯಕ ಸಿದ್ದರಾಮಯ್ಯ

By

Published : Oct 1, 2021, 6:37 PM IST

ಕೋಲಾರ: ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವ ಜೆಡಿಎಸ್ ನಾಯಕರು ಎತ್ತಿನಹೊಳೆ ಹಾಗೂ ಕೆಸಿವ್ಯಾಲಿ ನೀರಾವರಿ ಯೋಜನೆಗೆ ಅಡ್ಡಿಪಡಿಸಿದ್ರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.

ಹೆಚ್‌ಡಿಕೆ-ಹೆಚ್‌ಡಿಡಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ..

ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತ‌ನಾಡಿದ ಅವರು, ಮಾತು ಮಾತಿಗೂ ದೇವೇಗೌಡರ ಕುಟುಂಬ ಮಣ್ಣಿನ ಮಕ್ಕಳು ಅಂತಾ ಹೇಳುತ್ತಾರೆ. ಆದ್ರೆ, ನನ್ನ ಸರ್ಕಾರದಲ್ಲಿ ಎತ್ತಿನಹೊಳೆ ಹಾಗೂ ಕೆಸಿವ್ಯಾಲಿ ನೀರಾವರಿ ಯೋಜನೆಗೆ ಅಡ್ಡಪಡಿಸಿದ್ದರು.

ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವ ಅವರು ಕೆಸಿವ್ಯಾಲಿ ನೀರಾವರಿ ಯೋಜನೆಗೆ ವಿಷಪೂರಿತ ನೀರು ಎಂದು ವಿರೋಧ‌ ವ್ಯಕ್ತಪಡಿಸಿದ್ದರು. ಈ ಬಾರಿ ಮಣ್ಣಿನ ಮಕ್ಕಳಿಗೆ ಪಾಠ ಕಲಿಸಿ ಎಂದು‌ ಜನತೆಗೆ ಕರೆ ನೀಡಿದರು.

ಇದನ್ನೂ ಓದಿ:ಇಂಜೆಕ್ಷನ್ ಪಡೆದ ಸ್ವಲ್ಪಹೊತ್ತಲ್ಲೇ ಮಹಿಳೆ ಸಾವು; ಆಸ್ಪತ್ರೆ ವಿರುದ್ಧ ಸಂಬಂಧಿಕರ ಆಕ್ರೋಶ

ಅಲ್ಲದೇ ನೆನಗುದಿಗೆ ಬಿದ್ದಿರುವ ಎತ್ತಿನಹೊಳೆ ಯೋಜನೆಯನ್ನು ಮತ್ತೆ ನಮ್ಮ ಸರ್ಕಾರ ಬಂದ ಮೇಲೆ‌ ಮಾಡಿ ಕೊಡ್ತೀವಿ, ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲವನ್ನೂ ಮಾಡಿ ಕೊಡ್ತೀವಿ ಎಂದ್ರು‌. ಬಿಜೆಪಿ ಸರ್ಕಾರ ಬಂದ ಮೇಲೆ ಅವರ ಬಳಿ ಹಣವಿಲ್ಲ. ‌ನಮ್ಮ ಕಾಲದಲ್ಲಿ ಕೊಡುತ್ತಿದ್ದ ಅಕ್ಕಿ ಕಡಿತ ಮಾಡಿದ್ದಾರೆ, ಅವರಿಗೆ ಸಕ್ಕರೆ ಕಾಯಿಲೆ ಇರಬೇಕು ಎಂದು ಸಚಿವ ಉಮೇಶ್ ಕತ್ತಿ ವಿರುದ್ಧ ವ್ಯಂಗ್ಯವಾಡಿದ್ರು.

ABOUT THE AUTHOR

...view details