ಕೋಲಾರ:ಆತನ ಬಗ್ಗೆ ಮಾತನಾಡಲು ಅಸಹ್ಯ ಎನಿಸುತ್ತಿದೆ. ಮನುಷ್ಯನಿಗೆ ಇತಿಮಿತಿ ಇರಬೇಕು. ಸಚಿವನಾಗಿದ್ದ ಆತನಿಗೆ ಅದ್ಯಾವುದೂ ಇಲ್ಲ ಎಂದು ಕೋಲಾರ ಶಾಸಕ ಶ್ರೀನಿವಾಸಗೌಡ ಮಾಜಿ ಸಚಿವ ವರ್ತೂರು ಪ್ರಕಾಶ್ ವಿರುದ್ಧ ಹರಿಹಾಯ್ದರು.
ಆತನ ಬಗ್ಗೆ ಮಾತನಾಡಲು ಅಸಹ್ಯವಾಗುತ್ತಿದೆ: ವರ್ತೂರ್ಗೆ ಶ್ರೀನಿವಾಸ್ಗೌಡ ತಿರುಗೇಟು - Shrinivas reaction about Varthur prakash statement
ಆತನ ಬಗ್ಗೆ ಮಾತನಾಡಲು ಅಸಹ್ಯ ಎನಿಸುತ್ತಿದೆ. ಮನುಷ್ಯನಿಗೆ ಇತಿಮಿತಿ ಇರಬೇಕು. ಸಚಿವನಾಗಿದ್ದ ಆತನಿಗೆ ಅದ್ಯಾವುದು ಇಲ್ಲ ಎಂದು ಕೋಲಾರ ಶಾಸಕ ಶ್ರೀನಿವಾಸಗೌಡ ಮಾಜಿ ಸಚಿವ ವರ್ತೂರು ಪ್ರಕಾಶ್ ವಿರುದ್ಧ ಹರಿಹಾಯ್ದರು.
ಸತ್ತ ನಾಯಿಗೆ ಹೋಲಿಸಿ ಹೇಳಿಕೆ ನೀಡಿದ್ದ ವರ್ತೂರು ಪ್ರಕಾಶ್‍ಗೆ ತಿರುಗೇಟು ನೀಡಿದ ಶಾಸಕ, ಆತನ ಮಾತಿಗೆ ಉತ್ತರ ಕೊಡುವುದಕ್ಕಿಂತ ನಮ್ಮ ಬಾಯಿ ಶುದ್ದವಾಗಿಟ್ಟುಕೊಳ್ಳುವುದು ಲೇಸು. ಕೋಲಾರ ಕ್ಷೇತ್ರದಲ್ಲಿ ಎಂತೆಂಥಾ ಮಹಾನುಭಾವರು ಗೆದ್ದಿದ್ದಾರೆ.40 ವರ್ಷದ ರಾಜಕಾರಣದಲ್ಲಿ ಹಿರಿಯರ ತತ್ವಾದರ್ಶಗಳನ್ನ ಮೈಗೂಡಿಸಿಕೊಂಡು ಬಂದವನು. ನಾಲಿಗೆಗೆ ಹಿಡಿತ ಇರಬೇಕು. ಹಾಗೆ ನಾಲಿಗೆ ಮೇಲೆ ಹಿಡಿತ ಇಲ್ಲದವರ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದು ಹೇಳಿದರು.
ಮಂತ್ರಿ ಆಗಿದ್ದವನು ಗೌರವಯುತವಾಗಿ ಮಾತನಾಡಲಿ. ಎಣ್ಣೆ ಪಾರ್ಟಿ ಮಾಡಿಕೊಂಡು ಇದೆಲ್ಲಾ ಬೇಕಾ ಎಂದು ವರ್ತೂರ್ ಬಗ್ಗೆ ಶ್ರೀನಿವಾಸ್ ಗೌಡ ತೀವ್ರ ವಾಗ್ದಾಳಿ ನಡೆಸಿದರು.