ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ದೇವರಿಗೆ ಹುಂಡಿಗೆ ಖದೀಮರು ಕನ್ನ ಹಾಕಿದ್ದಾರೆ. ದೇವಾಲಯಗಳಲ್ಲಿ ಸರಣಿ ಕಳ್ಳತನ ಮಾಡಿದ್ದಾರೆ.
ಬಂಗಾರಪೇಟೆಯಲ್ಲಿ ದೇವಸ್ಥಾನ ಹುಂಡಿಗಳ ಸರಣಿ ಕಳವು: ಚಿನ್ನಾಭರಣ ದರೋಡೆ - ಕೋಲಾರ
ದೇವರ ಹುಂಡಿಯನ್ನೂ ಬಿಡದ ಕಳ್ಳರು, ದೇವಾಲಯಗಳಲ್ಲಿ ಸರಣಿ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ನಡೆದಿದೆ.
ಚಿನ್ನಾಭರಣ ದರೋಡೆ
ಬಂಗಾರಪೇಟೆ ಸುತ್ತಮುತ್ತಲು ಇರುವ ಕಣಂಬೆಲೆ ಆಂಜನೇಯ, ಹುಲಿಬೆಲೆ ಮಾರಮ್ಮ, ಸೂಲಿಕುಂಟೆ ಗಂಗಮ್ಮ ದೇವಾಲಯಗಳಲ್ಲಿ ಕಳ್ಳತನ ನಡೆದಿದೆ. ದೇವಾಲಯದಲ್ಲಿ ಹುಂಡಿಯಲ್ಲಿದ್ದ ಸಾವಿರಾರು ರೂಪಾಯಿ ಹಾಗೂ ದೇವರ ಮೇಲಿನ ಆಭರಣಗಳನ್ನು ಕದ್ದೊಯ್ದಿದ್ದಾರೆ.
ಬಂಗಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಬಂಗಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.