ಕೋಲಾರ: ಅವರೆಲ್ಲಾ ಪ್ರಾಣದ ಹಂಗು ತೊರೆದು, ಮಹಾಮಾರಿ ಕೊರೊನಾ ಮಧ್ಯೆ ಕೆಲಸ ಮಾಡೋ ವಾರಿಯರ್ಸ್. ಮನೆ-ಮಠ ಮತ್ತು ಸಂಬಂಧಗಳನ್ನು ಮರೆತು ನಿಸ್ವಾರ್ಥವಾಗಿ ಕೆಲಸ ಮಾಡೋ ದಿನಗೂಲಿ ನೌಕರರು. ಆದ್ರೆ ಸರಿಯಾದ ಸಂಬಳವಿಲ್ಲದೆ ಇವರ ಪಾಡು ಹೇಳತೀರದಾಗಿದೆ.
ದಿನಗೂಲಿ ನೌಕರರಿಗೆ 4 ತಿಂಗಳಿಂದ ಸಂಬಳ ನೀಡಿಲ್ಲ: ಕೆಲಸ ಮಾಡಿಸೋದು ಮಾತ್ರ ನಿಲ್ಲಿಸಿಲ್ಲ - ಸಂಬಳ
ಕೋಲಾರ ಜಿಲಾಸ್ಪತ್ರೆಯಲ್ಲಿ ಸುಮಾರು 74 ಮಂದಿ ನಾನ್ ಕ್ಲಿನಿಕಲ್ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಯನ್ನು ಸ್ವಚ್ಛಗೊಳಿಸುತ್ತಿರುವ ಈ ದಿನಗೂಲಿ ನೌಕರರಿಗೆ ಹಾಗೂ ಕೊರೊನಾ ಸಂಕಷ್ಟದ ಮಧ್ಯೆ ಹಗಲಿರುಳು ಕೆಲಸ ಮಾಡುತ್ತಿರುವ ಡಿ-ಗ್ರೂಪ್ ನೌಕರರಿಗೆ ವೇತನ ಸಿಕ್ಕಿ ನಾಲ್ಕು ತಿಂಗಳೆ ಕಳೆದಿದೆ.
ಇದ್ರಿಂದ ವೇತನಕ್ಕಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಡಾಕ್ಟರ್ ಹಾಗೂ ಸಿಬ್ಬಂದಿ 8 ರಿಂದ 12 ಗಂಟೆ ಕೆಲಸ ಮಾಡ್ತಿದ್ದಾರೆ. ಆದ್ರೆ ಡಿ.ಗ್ರೂಪ್ ನೌಕರರು ದಿನ ಪೂರ್ತಿ ಕೆಲಸ ಮಾಡಿದರೂ ಸಹ ವೇತನ ಮಾತ್ರ ಪ್ರತಿ ತಿಂಗಳು ನಮ್ಮ ಕೈ ಸೇರುತ್ತಿಲ್ಲ ಅನ್ನೋದು ನೌಕರರ ಅಳಲು.
ಕೋಲಾರ ಜಿಲಾಸ್ಪತ್ರೆಯಲ್ಲಿ ಸುಮಾರು 74 ಮಂದಿ ನಾನ್ ಕ್ಲಿನಿಕಲ್ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವ್ರಿಗೆ ಬೆಂಗಳೂರಿನಲ್ಲಿ ಗುತ್ತಿಗೆ ಪಡೆದಿರುವ ಏಜೆಂಟ್ ಮೂರು ನಾಲ್ಕು ತಿಂಗಳಿಗೊಮ್ಮೆ ವೇತನ ಪಾವತಿ ಮಾಡ್ತಿದಾರೆ. ಅದರಲ್ಲಿ ಕೊರೊನಾ ಶುರುವಾದ ದಿನದಿಂದ ಇಂದಿನವರೆಗೂ ಸಂಬಳವಿಲ್ಲದೆ ಕೆಲಸ ಮಾಡುತ್ತಿದ್ದಾರೆ.
ಅದೇ ರೀತಿ ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನೌಕಕರಿಗೆ ಸರ್ಕಾರದ ಅನುದಾನ ಬಂದರೆ ಮಾತ್ರ ಇವರ ಅಕೌಂಟ್ ಗಳಿಗೆ ಬರಲಿದೆ. ಪ್ರತಿ ತಿಂಗಳು ವೇತನಕ್ಕಾಗಿ ಪರಿತಪಿಸುವಂತಹ ಪರಿಸ್ಥಿತಿ ಬಂದಿದೆ. ಇನ್ನು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಸಿಬ್ಬಂದಿಯನ್ನು ಖಾಯಂ ಗೊಳಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ರು, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಕರೊನಾ ಸಂಕಷ್ಟದಲ್ಲಿ ಕೆಲಸ ಮಾಡಬೇಕಾ ಅಥವಾ ಬಿಡಬೇಕಾ ಅನ್ನೋ ಗೊಂದಲದಲ್ಲಿ ದಿನಗೂಲಿ ನೌಕರರಿದ್ದಾರೆ.
ಒಟ್ಟಾರೆ ಮಹಾಮಾರಿ ಕೊರೊನಾದ ನಡುವೆ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರ ಪಾಡು ಮೂರಾಬಟ್ಟೆಯಾಗಿದೆ. ಸ್ವಚ್ಛತೆ ಕಾಪಾಡುವಂತಹ ನೌಕರರಿಗೆ ವೇತನ ಸಿಗದೆ ಇರುವುದು ನಿಜಕ್ಕೂ ಬೇಸರದ ಸಂಗತಿ.