ಕೋಲಾರ: ಕೋಲಾರಕ್ಕೆ ಬರಬೇಕಿದ್ದ ಆಕ್ಸಿಜನ್ ಟ್ಯಾಂಕರ್ 24 ಗಂಟೆಗಳಿಂದ ಗ್ಯಾಸ್ ಗೋಡನ್ ಬಳಿ ಕಾಯುತ್ತಿದ್ದದನ್ನು ಮನಗಂಡ ಸಂಸದ ಎಸ್.ಮುನಿಸ್ವಾಮಿ ತಡರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟವರೊಂದಿಗೆ ಮಾತನಾಡಿ, ಖುದ್ದು ಸ್ಥಳದಲ್ಲಿಯೇ ಇದ್ದು ಆಕ್ಸಿಜನ್ ತುಂಬಿಸಿ ಕಳಿಸಿರುವಂತಹ ಘಟನೆ ಕಳೆದ ರಾತ್ರಿ ಜರುಗಿದೆ.
ಬೆಂಗಳೂರಿನ ಮಹದೇವಪುರ ಕ್ಷೇತ್ರದ ಗರುಡಾಚಾರ್ ಪಾಳ್ಯದಲ್ಲಿ ಇರುವಂತಹ ಬುರುಕ ಗ್ಯಾಸ್ ಲಿಮಿಟೆಡ್ನಲ್ಲಿ ಮಾಲೂರಿನ ವೆಂಕಟೇಶ್ವರ ಏರ್ ಪ್ರೊಡಕ್ಟ್ ಲಾರಿಯು ಕಳೆದ 24 ಗಂಟೆಗಳಿಂದ ಆಕ್ಸಿಜನ್ಗಾಗಿ ಕಾಯುತ್ತಿತ್ತು. ಸುಮಾರು 11 ಗಂಟೆ ಸಮಯದಲ್ಲಿ ಜಿಲ್ಲಾಧಿಕಾರಿಗಳು ಸಂಸದ ಎಸ್.ಮುನಿಸ್ವಾಮಿ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ, ತಕ್ಷಣ ಎಚ್ಚೆತ್ತ ಸಂಸದರು ಸ್ಥಳಕ್ಕೆ ಭೇಟಿ ನೀಡಿ ಬುರುಕ ಗ್ಯಾಸ್ ಲಿಮಿಟೆಡ್ನ ಮ್ಯಾನೇಜಿಂಗ್ ಡೈರೆಕ್ಟರ್ ಗುರುಪ್ರಸಾದ್ ಅವರೊಂದಿಗೆ ಮಾತನಾಡಿದರು. ಡ್ರಗ್ ಕಂಟ್ರೋಲರ್ಗಳಾದ ರಾಜೇಶ್ ಮತ್ತು ಮಹೇಶ್, ಆಪರೇಟರ್ಸ್ ಭೇಟಿ ಮಾಡಿ, ಕಳೆದ 24 ಗಂಟೆಗಳಿಂದ ಆಕ್ಸಿಜನ್ಗಾಗಿ ಕಾಯುತ್ತಿದ್ದಂತಹ ಟ್ಯಾಂಕರ್ಗೆ ಆಕ್ಸಿಜನ್ ತುಂಬಿಸಿ ಮಧ್ಯರಾತ್ರಿ 1 ಗಂಟೆಗೆ ಟ್ಯಾಂಕರ್ ಕಳುಹಿಸಿದರು.