ಕೋಲಾರ:ಇಂದು ಬೆಳಗ್ಗೆ ಆರ್ಟಿಓ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಒಂದೇ ನಂಬರ್ನಲ್ಲಿ ಸಂಚರಿಸುತ್ತಿದ್ದ ಮೂರು ಖಾಸಗಿ ಬಸ್ಗಳನ್ನು ವಶಕ್ಕೆ ಪಡೆದಿದ್ದಾರೆ.
ತೆರಿಗೆ ವಂಚಿಸಿ ಒಂದೇ ನಂಬರ್ನಲ್ಲಿ ಸಂಚರಿಸುತ್ತಿದ್ದ ಮೂರು ಬಸ್ ಆರ್ಟಿಒ ವಶ - ತೆರಿಗೆ ವಂಚನೆ ಪ್ರಕರಣ
ಕೋಲಾರದ ಮುಳಬಾಗಿಲು, ಬೇತಮಂಗಲ ಸೇರಿದಂತೆ ಆಂಧ್ರ ಕಡೆ ಒಂದೇ ನಂಬರ್ ಬಳಸಿ ಗ್ರಾಮೀಣ ಭಾಗದಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಪತ್ತೆ ಹಚ್ಚಲಾಗಿದೆ.
ತೆರಿಗೆ ವಂಚಿಸಿ ಒಂದೇ ನಂಬರ್ನಲ್ಲಿ ಸಂಚರಿಸುತ್ತಿದ್ದ ಮೂರು ಬಸ್ ಆರ್ಟಿಓ ವಶಕ್ಕೆ
ಆರ್ಟಿಒ ಇಲಾಖೆಗೆ ತೆರಿಗೆ ವಂಚನೆ ಮಾಡಿ, ಒಂದೇ ನಂಬರ್ ಪ್ಲೇಟ್ ಬಳಕೆ ಮಾಡಿ ಓಡಾಡುತ್ತಿದ್ದ ಖಚಿತ ಮಾಹಿತಿ ಪಡೆದ ಅಪರ ಸಾರಿಗೆ ಆಯುಕ್ತ ನರೇಂದ್ರ ಓಲೇಕಾರ, ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ನೇತೃತ್ವದಲ್ಲಿ ಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ.
ಕೋಲಾರದ ಮುಳಬಾಗಿಲು, ಬೇತಮಂಗಲ ಸೇರಿದಂತೆ ಆಂಧ್ರ ಕಡೆ ಒಂದೇ ನಂಬರ್ ಬಳಸಿ ಗ್ರಾಮೀಣ ಭಾಗದಲ್ಲಿ ಈ ವಾಹನಗಳು ಸಂಚರಿಸುತ್ತಿದ್ದವು. ಕೆಎ 06ಡಿ 4815 ನಂಬರ್ನ ಮೂರು ಬಸ್‌ಗಳ ಜೊತೆ ಚಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.