ಕೋಲಾರ: ನಗರದ ಭವಾನಿ ಚಿತ್ರಮಂದಿರದಲ್ಲಿ ಇಂದು ಬೆಳಗ್ಗೆ ಆರು ಗಂಟೆಗೆ ಪ್ರದರ್ಶನವಾಗಬೇಕಿದ್ದ ಡಿ ಬಾಸ್ ಅಭಿನಯದ ರಾಬರ್ಟ್ ಸಿನಿಮಾ ಎಂಟು ಗಂಟೆಯಾದರೂ ಪ್ರದರ್ಶನವಾಗದ ಹಿನ್ನಲೆ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಬರ್ಟ್ ಚಿತ್ರ ಪ್ರದರ್ಶನ ವಿಳಂಬ: ಚಿತ್ರಮಂದಿರ ಗೇಟ್ ಮುರಿದ ದಚ್ಚು ಅಭಿಮಾನಿಗಳು - Robert movie show delay
ಕೋಲಾರದ ಭವಾನಿ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆಗೆ ಪ್ರದರ್ಶನ ಆಗಬೇಕಿದ್ದ ರಾಬರ್ಟ್ ಚಿತ್ರ 8 ಗಂಟೆಯಾದರೂ ಪ್ರದರ್ಶನವಾಗದ ಕಾರಣ ಅಭಿಮಾನಿಗಳು ಚಿತ್ರ ಮಂದಿರ ಗೇಟ್ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
![ರಾಬರ್ಟ್ ಚಿತ್ರ ಪ್ರದರ್ಶನ ವಿಳಂಬ: ಚಿತ್ರಮಂದಿರ ಗೇಟ್ ಮುರಿದ ದಚ್ಚು ಅಭಿಮಾನಿಗಳು Kolar bhavani theater](https://etvbharatimages.akamaized.net/etvbharat/prod-images/768-512-10961659-thumbnail-3x2-chaiii.jpg)
ಕೋಲಾರ ಭವಾನಿ ಚಿತ್ರಮಂದಿರ
ರಾಬರ್ಟ್ ಚಿತ್ರ ಪ್ರದರ್ಶನ ವಿಳಂಬ ಆಕ್ರೋಶ ವ್ಯಕ್ತಪಡಿಸಿದ ದರ್ಶನ್ ಅಭಿಮಾನಿಗಳು
ಸಿನಿಮಾ ಪ್ರದರ್ಶನ ವಿಳಂಬದಿಂದ ಡಿ ಬಾಸ್ ಅಭಿಮಾನಿಗಳು, ಚಿತ್ರಮಂದಿರದ ಗೇಟ್ ಮುರಿದು ಚಿತ್ರಮಂದಿರದ ಮಾಲೀಕನಿಗೆ ಅವಾಚ್ಯ ಶಬ್ದಗಳಿಂದ ಬೈದು ಆಕ್ರೋಶ ಹೊರ ಹಾಕಿದ್ದಾರೆ.
ರಾಬರ್ಟ್ ಚಿತ್ರ ಬಿಡುಗಡೆ ಹಿನ್ನೆಲೆ, ಕೋಲಾರದ ಭವಾನಿ ಚಿತ್ರಮಂದಿರದ ಬಳಿ ಬೆಳಗ್ಗೆ 5 ಗಂಟೆಗೆ ಡಿ ಬಾಸ್ ಅಭಿಮಾನಿಗಳು ಜಮಾಯಿಸಿದ್ರು. ಚಿತ್ರ ಮಂದಿರದ ಎದುರು ಪಟಾಕಿ ಸಿಡಿಸಿ, ಬೃಹತ್ ಕಟೌಟ್ಗೆ ಹಾಲು, ಹೂವಿನ ಅಭಿಷೇಕ ಮಾಡಿದ್ದಾರೆ.