ಕರ್ನಾಟಕ

karnataka

ETV Bharat / state

ಕೋಲಾರ: ಗ್ರಾಮ ಪಂಚಾಯತ್​ ಅಧ್ಯಕ್ಷರ ಚುನಾವಣೆಯಲ್ಲಿ ವಿಕೋಪಕ್ಕೆ ತಿರುಗಿದ ಗಲಾಟೆ - ಕೋಲಾರದ ಶ್ರೀನಿವಾಸಪುರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗಲಾಟೆ

ಕಳೆದ ಮೇ ತಿಂಗಳಿನಲ್ಲಿ ಅಧ್ಯಕ್ಷರು ರಾಜೀನಾಮೆ ನೀಡಿದ ನಂತರ ನೂತನ ಅಧ್ಯಕ್ಷರ ಆಯ್ಕೆ ಕಾರ್ಯ ಇಂದು ನಡೆಯಿತು. ಎರಡೂ ಪಕ್ಷಗಳ ಬೆಂಬಲಿಗ ಸದಸ್ಯರು ಪಂಚಾಯತ್​ನಲ್ಲಿ ಸಮ ಬಲ ಹೊಂದಿದ್ದು, ತಲಾ 8 ಮತಗಳು ಬಂದಿದ್ದವು. ಇದೇ ವಿಷಯ ಗಲಾಟೆಗೆ ತಿರುಗಿದೆ.

ಗ್ರಾಮ ಪಂಚಾಯಿತಿ ಅದ್ಯಕ್ಷ ಚುನಾವಣೆಯಲ್ಲಿ ವಿಕೋಪಕ್ಕೆ ತಿರುಗಿದ ಗಲಾಟೆ
ಗ್ರಾಮ ಪಂಚಾಯಿತಿ ಅದ್ಯಕ್ಷ ಚುನಾವಣೆಯಲ್ಲಿ ವಿಕೋಪಕ್ಕೆ ತಿರುಗಿದ ಗಲಾಟೆ

By

Published : Jun 27, 2022, 3:08 PM IST

ಕೋಲಾರ: ಶ್ರೀನಿವಾಸಪುರದಲ್ಲಿ ಗ್ರಾಮ ಪಂಚಾಯತ್​ ಅದ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಶ್ರೀನಿವಾಸಪುರದ ಬೈರಗಾನಹಳ್ಳಿ ಪಂಚಾಯತ್​ನಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಒಂದು ಕಾರ್ ಮತ್ತು ಬೈಕ್ ಜಖಂಗೊಂಡಿವೆ.

ಕಳೆದ ಮೇ ತಿಂಗಳಿನಲ್ಲಿ ಅಧ್ಯಕ್ಷರು ರಾಜೀನಾಮೆ ನೀಡಿದ ನಂತರ ನೂತನ ಅಧ್ಯಕ್ಷರ ಆಯ್ಕೆ ಕಾರ್ಯ ಇಂದು ನಡೆಯಿತು. ಎರಡೂ ಪಕ್ಷಗಳ ಬೆಂಬಲಿಗ ಸದಸ್ಯರು ಪಂಚಾಯತ್​ನಲ್ಲಿ ಸಮಬಲ ಹೊಂದಿದ್ದು, ತಲಾ 8 ಮತಗಳು ಬಂದಿದ್ದವು. ಹೀಗಾಗಿ ಲಾಟರಿ ಮೂಲಕ ನಡೆದ ಆಯ್ಕೆಯಲ್ಲಿ ಕಾಂಗ್ರೆಸ್​​​​​ನ ನಿರ್ಮಲಮ್ಮ ಮತ್ತು ಉಪಾಧ್ಯಕ್ಷೆಯಾಗಿ ಗೌರಮ್ಮ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯತ್​ ಅಧ್ಯಕ್ಷರ ಚುನಾವಣೆಯಲ್ಲಿ ವಿಕೋಪಕ್ಕೆ ತಿರುಗಿದ ಗಲಾಟೆ

ಈ ಸಂದರ್ಭದಲ್ಲಿ ಮಾತಿನ ಚಕಮಕಿ ಉಂಟಾಗಿ ಜಗಳ ವಿಕೋಪಕ್ಕೆ ತಿರುಗಿದೆ. ಎರಡೂ ಪಕ್ಷಗಳ ಬೆಂಬಲಿಗರು ಕೈ ಕೈ ಮಿಲಾಯಿಸಲು ಮುಂದಾಗಿದ್ದಾರೆ. ಶ್ರೀನಿವಾಸ್ ಎಂಬುವರಿಗೆ ಸೇರಿದ ಕಾರ್​​​ಗೆ ಕಲ್ಲು ತೂರಲಾಗಿದೆ. ಸದ್ಯ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಮೈಸೂರು: ವಿಷ ಕುಡಿದು ಪೊಲೀಸ್ ಠಾಣೆಗೆ ಬಂದ ಕೊಲೆ ಆರೋಪಿ!

For All Latest Updates

TAGGED:

ABOUT THE AUTHOR

...view details