ಕರ್ನಾಟಕ

karnataka

ETV Bharat / state

ಬಂಗಾರಪೇಟೆ; ಅಕ್ರಮವಾಗಿ ಸಾಗಿಸುತ್ತಿದ್ದ ರಕ್ತ ಚಂದನ ವಶಕ್ಕೆ - Bangarapet Police Station

ಬಂಗಾರಪೇಟೆಯಿಂದ ಟೇಕಲ್ ರಸ್ತೆಯ ಮೂಲಕ ಮಾಲೂರಿನ ಗಡಿ ಭಾಗದಲ್ಲಿರುವ ಕಟ್ಟಿಗೇನಹಳ್ಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 11 ರಕ್ತ ಚಂದನ ತುಂಡುಗಳನ್ನು ಬಂಗಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Red sandalwood seize in kolar
11 ಅಕ್ರಮ ರಕ್ತ ಚಂದನದ ತುಂಡುಗಳು ವಶಕ್ಕೆ

By

Published : Mar 27, 2021, 12:06 PM IST

ಕೋಲಾರ: ಬಂಗಾರಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸಾಗಿಸುತ್ತಿದ್ದ 11 ರಕ್ತ ಚಂದನ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

11 ಅಕ್ರಮ ರಕ್ತ ಚಂದನದ ತುಂಡುಗಳು ವಶಕ್ಕೆ

ಬಂಗಾರಪೇಟೆಯಿಂದ ಟೇಕಲ್ ರಸ್ತೆಯ ಮೂಲಕ ಮಾಲೂರಿನ ಗಡಿ ಭಾಗದಲ್ಲಿರುವಂತಹ ಕಟ್ಟಿಗೇನಹಳ್ಳಿಗೆ ಟೊಮ್ಯಾಟೊ ಬಾಕ್ಸ್​ ತುಂಬಿದ್ದ ಟೆಂಪೋದಲ್ಲಿ ಅಕ್ರಮ ರಕ್ತಚಂದನ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.

ಬಂಗಾರಪೇಟೆ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಚಾಲಕ ಸೇರಿ ಆರೋಪಿಗಳು ಪರಾರಿಯಾಗಿದ್ದು, 11 ರಕ್ತ ಚಂದನ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಬಂಗಾಳದಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ

ABOUT THE AUTHOR

...view details