ಕರ್ನಾಟಕ

karnataka

ETV Bharat / state

ಬಿಟ್​ ಕಾಯಿನ್​ ಕುರಿತು ನ್ಯಾಯಾಂಗ ತನಿಖೆಯಾಗಲಿ: ರಾಮಲಿಂಗಾರೆಡ್ಡಿ ಆಗ್ರಹ - ಕೋಲಾರ ಜಿಲ್ಲಾ ಸುದ್ದಿ

ಬಿಟ್ ಕಾಯಿನ್ ವ್ಯವಹಾರ (bitcoin scam) ತಪ್ಪಲ್ಲ. ಆದರೆ ಹ್ಯಾಕಿಂಗ್ ಮಾಡಿದವರ ವಿರುದ್ದ ಕ್ರಮ ಕೈಗೊಂಡಿಲ್ಲ ಯಾಕೆ. ಈ ಹಗರಣದಲ್ಲಿ ಯಾರೇ ಭಾಗಿಯಾದ್ರೂ ಸೂಕ್ತ ತನಿಖೆ ನಡೆಸಿ ಶಿಕ್ಷೆ ನೀಡಲಿ. ಹಾಲಿ ಹೈಕೋರ್ಟ್​ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಗ್ರಹಿಸಿದರು.

ramlingareddy force govt to do judicial inquiry in bitcoin scam
ರಾಮಲಿಂಗಾರೆಡ್ಡಿ

By

Published : Nov 16, 2021, 11:01 AM IST

ಕೋಲಾರ: ಬಿಟ್ ಕಾಯಿನ್ ಪ್ರಕರಣದಲ್ಲಿ (bitcoin scam)ಯಾರೇ ತಪ್ಪಿತಸ್ಥರಿದ್ರು ಕ್ರಮ ಆಗಲಿ. ನಿಸ್ಪಕ್ಷಪಾತವಾಗಿ ತನಿಖೆ ನಡೆಯಲಿ. ನ್ಯಾಯಾಂಗ ತನಿಖೆಯಾಗಲಿ ಎಂದು ಕೋಲಾರದಲ್ಲಿ ಕಾಂಗ್ರೆಸ್​​ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ (Ramalinga Reddy) ಸರ್ಕಾರಕ್ಕೆ ಒತ್ತಾಯಿಸಿದರು.

ಬಿಟ್​ ಕಾಯಿನ್​ ಕುರಿತು ನ್ಯಾಯಾಂಗ ತನಿಖೆಯಾಗಲಿ

ನಗರದ ಕಾಂಗ್ರೆಸ್ ಕಚೇರಿಯಲ್ಲಿ 1971ರ ಬಾಂಗ್ಲಾ ದೇಶ ವಿಮೋಚನಾ ದಿನಾಚರಣೆ ನಿಮಿತ್ತ ಮುಖಂಡರ ಸಭೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಟ್ ಕಾಯಿನ್ ವ್ಯವಹಾರ ತಪ್ಪಲ್ಲ. ಆದರೆ, ಹ್ಯಾಕಿಂಗ್ ಮಾಡಿದವರ ವಿರುದ್ದ ಕ್ರಮ ಕೈಗೊಂಡಿಲ್ಲ ಯಾಕೆ. ಬಿಜೆಪಿ ಸರ್ಕಾರದ ತನಿಖೆ ಮೇಲೆ ನಮಗೆ ನಂಬಿಕೆಯಿಲ್ಲ ಹಾಗಾಗಿ ಹೈಕೋರ್ಟ್​​ ಹಾಲಿ ನ್ಯಾಯಾಧೀಶರ ಸಮ್ಮುಖದಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿದರು.

ಬಿಟ್ ಕಾಯಿನ್‌ ಪ್ರಕರಣ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಸ್ಥಾನಕ್ಕೆ ಕುತ್ತು ಬರುತ್ತಾ ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದರು. ಈಗಾಗಲೇ ಹೈಕಮಾಂಡ್ ಹಂತದಲ್ಲಿ ಜಗದೀಶ್ ಶೆಟ್ಟರ್ ಹಾಗೂ ಅಮಿತ್ ಶಾ ರಾಜ್ಯ ಮುಖಂಡರ ಜೊತೆ ಸಭೆ ಮಾಡಿದ್ದಾರೆ. ಅವರು ನಾಲ್ಕು ಗೋಡೆ ಮಧ್ಯೆ ಏನು ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದರು.

ABOUT THE AUTHOR

...view details